Saturday, June 7, 2025

ಅಪ್ಪು ಅಭಿನಯದ ಕೊನೆಯ ಚಿತ್ರ ‘ಜೇಮ್ಸ್’ ಟೀಸರ್ ಬಿಡುಗಡೆ

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಟನೆಯ ಕೊನೆಯ ಚಿತ್ರ ಜೇಮ್ಸ್ ಸಿನಿಮಾದ ಟೀಸರ್ ಶುಕ್ರವಾರ ರಿಲೀಸ್ ಆಗಿದೆ. ಟೀಸರ್ ನೋಡಿ ಅಭಿಮಾನಿಗಳು ಫುಲ್ ಥ್ರಿಲ್ ಆಗಿದ್ದಾರೆ.


ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಮೊಟ್ಟ ಮೊದಲಬಾರಿಗೆ ಸೋಲ್ಜರ್ ಪಾತ್ರದಲ್ಲಿ ಮಿಂಚಿದ್ದು, ಈ ಸಿನಿಮಾದಲ್ಲಿ ಶಿವರಾಜ್‌ಕುಮಾರ್ ಮತ್ತು ರಾಘವೇಂದ್ರ ರಾಜ್‌ಕುಮಾರ್ ಕೂಡ ನಟಿಸಿದ್ದಾರೆ. ಟೀಸರ್ ಮೂಲಕ ಇನ್ನಷ್ಟು ನಿರೀಕ್ಷೆಯನ್ನು ಹೆಚ್ಚಿಸಿರುವ ಈ ಸಿನಿಮಾ ಮಾರ್ಚ್ 17, ಅಪ್ಪು ಬರ್ತ್ ಡೇ ದಿನ ಬಿಡುಗಡೆಗೊಳ್ಳಲಿದೆ.


ಜೇಮ್ಸ್ ಟೀಸರ್ ಆರಂಭದಿಂದ ಕೊನೆಯವರೆಗೂ ಆ್ಯಕ್ಷನ್ ದೃಶ್ಯಗಳು ತುಂಬಿಕೊಂಡಿದ್ದು, ಅಪ್ಪು ಗನ್ ಹಿಡಿದು ಮಿಂಚಿದ್ದಾರೆ. ಈ ಚಿತ್ರದ ಟೀಸರ್ ಪಿಆರ್‌ಕೆ ಯುಟ್ಯೂಬ್ ಚಾನೆಲ್‌ನಲ್ಲಿ ಮಾತ್ರವಲ್ಲದೇ ಕರ್ನಾಟಕದಲ್ಲಿರುವ ಎಲ್ಲಾ ಚಿತ್ರಮಂದಿರ ಹಾಗೂ ಮಲ್ಟಿಪ್ಲೆಕ್ಸ್ ಗಳಲ್ಲಿ ಪ್ರದರ್ಶನವಾಗುತ್ತಿದೆ.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles