Saturday, June 7, 2025

ಕೆನಡಾ ಸಂಸತ್ತಿನಲ್ಲಿ ಮೊಳಗಿದ ಕನ್ನಡ ಕಲರವ

ಕೆನಡಾ: ಕರ್ನಾಟಕದ ತುಮಕೂರು ಮೂಲದ ಚಂದ್ರ ಆರ್ಯ ಅವರು ಕೆನಡಾ ದೇಶದಲ್ಲಿ ಸಂಸದರಾಗಿದ್ದು, ಅವರು ಕೆನಡಾ ಸಂಸತ್ತಿನಲ್ಲಿ ತಮ್ಮ ಮಾತೃಭಾಷೆ ಕನ್ನಡದಲ್ಲಿ ಮಾತನಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಈ ಮೂಲಕ ಕೆನಡಾ ಸಂಸತ್ತಿನಲ್ಲಿ ಕನ್ನಡ ಕಲರವ ಪಸರಿಸಿದ್ದಾರೆ.

ಕೆನಡಾದಲ್ಲಿ ನೆಲೆಸಿರುವ ತುಮಕೂರು ಮೂಲಕ ಚಂದ್ರ ಆರ್ಯ ಅವರು ಸಭಾಪತಿಯಲ್ಲಿ ಒಪ್ಪಿಗೆ ಪಡೆದು ಕನ್ನಡದಲ್ಲಿ ಮಾತನಾಡಿದ್ದು, ಇವರ ಈ ನಡೆಗೆ ಸಂಸತ್ತಿನಲ್ಲಿ ಚಪ್ಪಾಳೆಯ ಸುರಿಮಳೆಯೇ ಆಗಿದೆ. ಕೆನಡಾ ಸಂಸತ್ತಿನಲ್ಲಿ ಚಂದ್ರ ಆರ್ಯ ಅವರು ಕನ್ನಡದಲ್ಲಿ ಮಾತನಾಡುವ ಮೂಲಕ ಇದೇ ಮೊದಲ ಬಾರಿಗೆ ಬೇರೆ ದೇಶದ ಸಂಸತ್ತಿನಲ್ಲಿ ಕನ್ನಡ ಮಾತನಾಡಿದ ಮೊದಲ ವ್ಯಕ್ತಿ ಎನಿಸಿಕೊಂಡಿದ್ದಾರೆ.

ಚಂದ್ರ ಆರ್ಯ ಅವರು ಕನ್ನಡದಲ್ಲಿ ಮಾತನಾಡುವ ವಿಡಿಯೋವನ್ನು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, 5000ಕ್ಕೂ ಅಧಿಕ ಬಾರಿ ಈ ಟ್ವೀಟ್ ರೀಟ್ವೀಟ್ ಆಗಿದೆ. ಹಾಗೂ 32 ಸಾವಿರಕ್ಕೂ ಅಧಿಕ ಮಂದಿ ಲೈಕ್ಸ್ ಮಾಡಿದ್ದಾರೆ.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles