ಕಟಪಾಡಿ: ಬಿಲ್ಲವರ 2 ನೇ ದೊಡ್ಡ ದೇವಸ್ಥಾನ ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರ ವಾರ್ಷಿಕ ಉತ್ಸವ ಸಂಪನ್ನಗೊಂಡಿತು.
ವಾರ್ಷಿಕ ಉತ್ಸವದಲ್ಲಿ ಹಗಲು ರಥೋತ್ಸವ ಮತ್ತು ರಾತ್ರಿ ರಥೋತ್ಸವ ಅದ್ದೂರಿಯಿಂದ ನಡೆಯಿತು. ಕೆರೆ ಪೂಜೆ, ಕಟ್ಟೆಪೂಜೆ ಓಕುಳಿ ಯೊಂದಿಗೆ ದೇವತಾ ಕಾರ್ಯಕ್ರಮಗಳು ನಡೆದವು. ದೇವಾಲಯವು ಹೂವಿನ ಅಲಂಕಾರ, ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿತ್ತು. ಈ ಸಂದರ್ಭ ಕ್ಷೇತ್ರ ಆಡಳಿತ ಮಂಡಳಿಯ ಪದಾಧಿಕಾರಿಗಳು, ಗುರಿಕಾರರು, ಭಕ್ತಾದಿಗಳು ಉಪಸ್ಥಿತರಿದ್ದರು.