ಬೆಂಗಳೂರು: ಹಿಜಾಬ್, ಕೇಸರಿ ಶಾಲು ಸಂಘರ್ಷದ ಸಂದರ್ಭ ‘ನಾನು ಹಿಜಾಬ್ ಧರಿಸಿಯೇ ವಿಧಾನಸೌಧಕ್ಕೆ ಆಗಮಿಸುತ್ತೇನೆ, ಧೈರ್ಯವಿದ್ದರೆ ತಡೆಯಲಿ’ ಎಂದು ಹೇಳಿದ್ದ ಶಾಸಕಿ ಖನೀಜ ಫಾತಿಮಾ ಸೋಮವಾರ ಹಿಜಾಬ್ ಧರಿಸಿ ಕಲಾಪದಲ್ಲಿ ಭಾಗವಹಿಸಿದ್ದಾರೆ.
ಕಲ್ಬುರ್ಗಿ ಉತ್ತರ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಖನೀಜ ಫಾತಿಮಾ ‘ಹಿಜಾಬ್ ನಮ್ಮ ಹಕ್ಕು, ಇದನ್ನು ಪ್ರಶ್ನೆ ಮಾಡುವ ಹಕ್ಕು ಯಾರಿಗೂ ಇಲ್ಲ. ನಾನು ಸಹ ಅಸಂಬ್ಲಿಯಲ್ಲಿ ಹಿಜಾಬ್ ಧರಿಸಿಯೇ ಕುಳಿತುಕೊಳ್ಳುತ್ತೇನೆ. ಧೈರ್ಯ ಇದ್ದವರು ನನ್ನ ತಡೆಯಲಿ’ ಎಂದು ಸವಾಲು ಹಾಕಿದ್ದರು. ಅದರಂತೆ ಇಂದು ವಿಧಾನಸೌಧಕ್ಕೆ ಹಿಜಾಬ್ ಧರಿಸಿ ಬಂದು ಕಲಾಪದಲ್ಲಿ ಭಾಗವಹಿಸಿದ್ದಾರೆ. ಖನೀಜ ಫಾತಿಮಾ ಹಿಂದಿನ ಅಧಿವೇಶನದಲ್ಲೂ ಹಿಜಾಬ್ ಧರಿಸಿಯೇ ಭಾಗವಹಿಸುತ್ತಿದ್ದರು.