ಕೀವ್: ಉಕ್ರೇನ್ನ ಕೀವ್ ಹಾಗೂ ಖಾರ್ಕೀವ್ಗಳ ಮೇಲೆ ರಷ್ಯಾ ದಾಳಿ ತೀವ್ರವಾಗಿದ್ದು, ಕೀವ್ನ ಟಿವಿ ಟವರ್ ಮೇಲೆ ರಷ್ಯಾ ಬಾಂಬ್ ದಾಳಿ ನಡೆಸಿದೆ. ಈ ದಾಳಿಯಿಂದ ದೇಶಾದ್ಯಂತ ಟಿವಿ ಚಾನಲ್ಗಳ ಪ್ರಸಾರ ನಿಂತಿದ್ದು, ದಾಳಿಯಲ್ಲಿ ಐವರು ಮೃತಪಟ್ಟಿರುವುದಾಗಿ ವರದಿಯಾಗಿದೆ.
ರಷ್ಯಾವು ಕೀವ್ನ ಭದ್ರತಾ ಸೇವೆಯ ಪ್ರಧಾನ ಕಚೇರಿ ಮೇಲೆ ದಾಳಿ ಮಾಡುವುದಾಗಿ ಎಚ್ಚರಿಕೆ ನೀಡಿ, ಸಮೀಪದಲ್ಲಿ ವಾಸಿಸುತ್ತಿರುವ ಜನಗಳು ಸ್ಥಳಾಂತರಗೊಳ್ಳುವಂತೆ ಸೂಚನೆ ನೀಡಿತ್ತು. ಈ ಯುದ್ಧದ ಕುರಿತು ಮಾಹಿತಿ ಸಿಗದಂತೆ ಕೀವ್ನಲ್ಲಿರುವ ಇನ್ಫಾರ್ಮೇಶನ್ ಮತ್ತು ಸೈಕಾಲಜಿಕಲ್ ಸೆಂಟರ್ ಮೇಲೆ ಆಕ್ರಮಣ ಮಾಡುವುದಾಗಿ ಎಚ್ಚರಿಕೆ ನೀಡಿತ್ತು.
ಖಾರ್ಕೀವ್ ನಗರದ ಮೇಲೆ ರಷ್ಯಾ ನಿರಂತರವಾಘಿ ಶೆಲ್, ರಾಕೆಟ್ ದಾಳಿ ನಡೆಸಿದ್ದು, ಈ ದಾಳಿಯಲ್ಲಿ ಸುಮಾರು 11 ಮಂದಿ ಮೃತಪಟ್ಟಿದ್ದು 35ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸೋಮವಾರ ಬೆಲಾರಸ್ನ ಗೋಮೆಲ್ನಲ್ಲಿ ರಷ್ಯಾ ಹಾಗೂ ಉಕ್ರೇನ್ ನಡುವೆ ಮೊದಲ ಸುತ್ತಿನ ಮಾತುಕತೆ ನಡೆದಿದ್ದು, ಮಾರ್ಚ್ 2ರಂದು ಎರಡನೇ ಸುತ್ತಿನ ಮಾತುಕತೆ ನಡೆಯಲಿದೆ.