Saturday, June 7, 2025

ಉಳಿದ ಕಾಫಿ ಪುಡಿಯಿಂದ ಚರ್ಮದ ಕಾಂತಿ ಹೆಚ್ಚುತ್ತದೆ

ದಿನವೂ ನಾವು ಮನೆಯಲ್ಲಿ ಕಾಫಿಯನ್ನು ಕುಡಿಯುತ್ತೇವೆ. ಆದರೆ ಕಾಫಿ ಮಾಡಿಕೊಂಡು ಉಳಿದಂತಹ ಕಾಫಿ ಪುಡಿಯನ್ನು ಎಸೆಯುತ್ತೇವೆ ಅದರ ಬದಲು ನಾವು ಹೇಳುವ ವಿಧಾನವನ್ನ ಬಳಸಿ ನಿಮ್ಮ ಚರ್ಮದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಿ.

  • ಕಾಫಿ ಪುಡಿಯನ್ನು ಚರ್ಮದ ಮೇಲೆ ಸ್ಕ್ರಬ್ ಮಾಡಿಕೊಳ್ಳುವುದರಿಂದ ಚರ್ಮದ ಸತ್ತ ಜೀವಕೋಶಗಳನ್ನು, ಧೂಳನ್ನು ತೆಗೆದುಹಾಕುತ್ತದೆ.
  • ಕಾಫಿ ಪುಡಿಯಲ್ಲಿ ಕೆಫಿನ್ ಅಂಶವಿರುವಿರುವುದರಿಂದ ಇದು ರಕ್ತ ಸಂಚಾರಕ್ಕೆ, ಉರಿಯೂತ ಕಡಿಮೆ ಮಾಡಲು ಸಹಕಾರಿಯಾಗಿದೆ. ಆದ್ದರಿಂದ ಕಾಫಿ ಪುಡಿಯನ್ನು ಕಪ್ಪು ಚುಕ್ಕೆ ಆಗಿರುವಂತಹ ಚರ್ಮದ ಮೇಲೆ ಸ್ಕ್ರಬ್ ಮಾಡುವುದರಿಂದ ಕಪ್ಪು ಚುಕ್ಕೆಗಳು ಕಡಿಮೆಯಾಗಿ ಚರ್ಮದ ಕಾಂತಿ ಹೆಚ್ಚುತ್ತದೆ.
  • ಮಹಿಳೆಯರು ಗರ್ಭಿಣಿಯಾದ ಸಂದರ್ಭದಲ್ಲಿ ಹಾಗೂ ತೂಕ ಅತಿಯಾದಾಗ ಸ್ಟ್ರೆಚ್ ಮಾರ್ಕ್ಸ್ ಬರುತ್ತದೆ. ಸ್ಟ್ರೆಚ್ ಮಾರ್ಕ್ಸ್ ಇರುವಲ್ಲಿ ಕಾಫಿ ಪುಡಿಯನ್ನು ಸ್ಕ್ರಬ್ ಮಾಡುವುದರಿಂದ ಸ್ಟ್ರೆಚ್ ಮಾರ್ಕ್ಸ್ ಕಡಿಮೆಯಾಗುತ್ತದೆ.
  • ಬಳಸಿದ ಕಾಫಿ ಪುಡಿ, ಉಪ್ಪು, ಜೇನುತುಪ್ಪ, ಒಂದು ಚಮಚ ಸಕ್ಕರೆ ಹಾಗೂ ಒಂದು ಮೊಟ್ಟೆಯ ಬಿಳಿ ಭಾಗವನ್ನು ಒಂದು ಬೌಲ್ ಹಾಕಿಕೊಂಡು ಚೆನ್ನಾಗಿ ಕಲಸಿ ಪೇಸ್ಟ್ ತಯಾರಿಸಿಕೊಳ್ಳಿ. ನಂತರ ಈ ಪೇಸ್ಟನ್ನು ಮುಖಕ್ಕೆ ಹಚ್ಚಿಕೊಂಡು ೧೦ ನಿಮಿಷಗಳ ಕಾಲ ಮುಖವನ್ನು ಮಸಾಜ್ ಮಾಡಿಕೊಳ್ಳಿ ನಂತರ ಬಿಸಿ ನೀರಿನಿಂದ ತೊಳೆಯಿರಿ. ಹೀಗೆ ವಾರಕ್ಕೆ ಒಮ್ಮೆಯಾದರೂ ಮಾಡುವುದರಿಂದ ಚರ್ಮ ನೆರಿಗೆ ಕಟ್ಟುವುದು ಕಡಿಮೆಯಾಗುತ್ತದೆ.
Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles