ಕಾರ್ಕಳ: ಕಾರ್ಕಳ ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರ ಆಯ್ಕೆಯಲ್ಲಿ ಮುಖ್ಯಾಧಿಕಾರಿಗಳು ಏಕಪಕ್ಷೀಯ ಧೋರಣೆಯನ್ನು ತೋರಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮವನ್ನು ಕೈಗೊಂಡು ಹೊಸ ಸ್ಥಾಯಿ ಸಮಿತಿಯನ್ನು ರಚಿಸಿ, ನಿರ್ದೇಶನ ನೀಡುವಂತೆ ಕೋರಿ ಕಾಂಗ್ರೆಸ್ ಪಕ್ಷದ ಸದಸ್ಯರು ಉಡುಪಿ ಜಿಲ್ಲಾಧಿಕಾರಿ ಕೂರ್ಮರಾವ್ ಅವರಿಗೆೆ ಮಂಗಳವಾರದಂದು ಮನವಿಯನ್ನು ಸಲ್ಲಿಸಲಾಯಿತು.
ಕಾರ್ಕಳ ಪುರಸಭೆಯ ಸ್ಥಾಯಿ ಸಮಿತಿಯ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಸಮಾನ ಮತವನ್ನು ಹೊಂದಿದ್ದರೂ, ಮುಖ್ಯಾಧಿಕಾರಿ ರೂಪಾ ಶೆಟ್ಟಿಯವರು ಒತ್ತಡಕ್ಕೆ ಮಣಿದು ಸದ್ರಿ ಸಭೆಯಲ್ಲಿ ಬಿಜೆಪಿಯವರಿಗೆ ಮಾತ್ರ ಆಯ್ಕೆಗೆ ಅವಕಾಶ ನೀಡಿದ್ದಾರೆ. ಮುಖ್ಯಾಧಿಕಾರಿಗಳ ಈ ನಡೆ ಕಾಂಗ್ರೆಸ್ ಸದಸ್ಯರ ಹಕ್ಕಿಗೆ ಚ್ಯುತಿಯನ್ನುಂಟು ಮಾಡಿದೆ ಎಂದು ಆರೋಪಿಸಿ, ಈಗಾಗಲೇ ನೇಮಕಗೊಂಡಿರುವ ಸ್ಥಾಯಿ ಸಮಿತಿಯನ್ನು ಬರ್ಖಾಸ್ತುಗೊಳಿಸಿ ಹೊಸ ಸ್ಥಾಯಿ ಸಮಿತಿಯನ್ನು ರಚಿಸುವಂತೆ ಉಡುಪಿ ಜಿಲ್ಲಾಧಿಖಾರಿಯವರಿಗೆ ಮನವಿಯನ್ನು ಸಲ್ಲಿಸಲಾಯ್ತು.


