Saturday, June 7, 2025

ಅಭಿಮಾನಿಗಳಿಗೆ ವ್ಯಾಲೆಂಟೈನ್ ಗಿಫ್ಟ್ ನೀಡಲಿರುವ ‘ಲವ್ ಮಾಕ್ಟೇಲ್ ೨’ ತಂಡ

ಲವ್ ಮಾಕ್ಟೇಲ್ ಚಿತ್ರದ ಮೊದಲನೇ ಭಾಗದ ಯಶಸ್ಸಿನ ನಂತರ ಇದೀಗ ಇದೇ ಚಿತ್ರ ತಂಡ ಸಿನಿಮಾದ ಪಾರ್ಟ್ ೨ ಬಿಡುಗಡೆ ಮಾಡಲು ಸಿದ್ಧವಾಗಿದೆ. ಇದು ಡಾರ್ಲಿಂಗ್ ಕೃಷ್ಣ ನಿರ್ದೇಶನದ ರೊಮ್ಯಾಂಟಿಕ್ ಎಂಟರ್‌ಟೈನಿಂಗ್ ಚಲನಚಿತ್ರವಾಗಿದ್ದು, ಚಿತ್ರದ ಫಸ್ಟಲುಕ್, ಪೋಸ್ಟರ್ ಮತ್ತು ಹಾಡುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಲಾಗಿದೆ.


ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಡಾರ್ಲಿಂಗ್ ಕೃಷ್ಣ, ನಮ್ಮ ಸಿನಿಮಾದ ಪೋಸ್ಟರ್ ಅನ್ನು ಇಷ್ಟಪಟ್ಟಿದ್ದಕ್ಕಾಗಿ ಮತ್ತು ಶೇರ್ ಮಾಡಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ಸಿನಿಮಾವನ್ನು ಫೆಬ್ರವರಿ ೧೧ರಂದು ತೆರೆಕಾಣಿಸುವುದಾಗಿ ಪ್ರೇಕ್ಷಕರಿಗೆ ಮಾಹಿತಿಯನ್ನು ನೀಡಿದ್ದಾರೆ.


ಡಾರ್ಲಿಂಗ್ ಕೃಷ್ಣ ತನ್ನ ಚೊಚ್ಚಲ ನಿರ್ದೇಶನದ ಮೂಲಕ ಗುರುತಿಸಿಕೊಂಡ ಲವ್ ಮಾಕ್ಟೇಲ್ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ನಿರೀಕ್ಷೆಗೆ ತಕ್ಕ ಯಶಸ್ಸನ್ನು ಕಾಣದಿದ್ದರೂ, ಒ.ಟಿ.ಟಿ. ಪ್ಲಾಟ್ ಫಾರ್ಮ್ ನಲ್ಲಿ ಯಶಸ್ವಿ ಪ್ರದರ್ಶನ ಕಂಡಿದೆ. ಅಲ್ಲದೇ ಈ ಚಿತ್ರವನ್ನು ತೆಲುಗು ಭಾಷೆಯಲ್ಲಿಯೂ ಕೂಡ ರಿಮೇಕ್ ಮಾಡಲಾಗುತ್ತಿದೆ.


ಲವ್ ಮೊಕ್ಟೇಲ್ -೨ ಚಿತ್ರದಲ್ಲಿ ನಾಯಕ ನಟನಾಗಿ ಡಾರ್ಲಿಂಗ್ ಕೃಷ್ಣ ಕಾಣಿಸಿಕೊಂಡಿದ್ದು, ನಾಯಕ ನಟಿಯಾಗಿ ರೆಚೆಲ್ ಡೇವಿಡ್ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದ ಮುಖಾಂತರ ಮೊದಲಬಾರಿಗೆ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿರುವ ರೆಚೆಲ್ ಅವರ ನಟನೆಯನ್ನು ನೋಡಲು ಜನರು ಕಾತುರದಿಂದ ಕಾಯುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಈ ಚಿತ್ರದ ‘ಸಂಚಾರಿಯಾಗು ನೀ’ ಲಿರಿಕಲ್ ವಿಡಿಯೋ ಸಾಂಗ್ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ. ರಾಘವೇಂದ್ರ ಕಾಮತ್ ಸಾಹಿತ್ಯ ಹಾಗೂ ನಕುಲ್ ಅಭಯಂಕರ್ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಈ ಹಾಡಿಗೆ ಸಂಗೀತಪ್ರೀಯರು ಉತ್ತಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.


ಚಿತ್ರತಂಡ ಈಗಾಗಲೇ ಲವ್ ಮಾಕ್ಟೇಲ್-೨ ಸಿನಿಮಾ ರಿಲೀಸ್‌ಗೆ ಸಜ್ಜಾಗಿದ್ದು, ಪ್ರೇಕ್ಷಕರು ಈ ಬಾರಿಯೂ ಕೂಡ ಕಥೆಯಲ್ಲಿ ಯಾವ ರೀತಿಯ ತಿರುವು ಇರಬಹುದು ಎಂಬ ಅಪೇಕ್ಷೆಯೊಂದಿಗೆ ಕಾತುರದಿಂದ ಕಾಯುತ್ತಿದ್ದಾರೆ. ಲವ್ ಮೊಕ್ಟೇಲ್-೧ ಚಿತ್ರದ ಮೂಲಕ ಈಗಾಗಲೇ ಪ್ರೇಕ್ಷಕರ ಮನಗೆದ್ದಿರುವ ಚಿತ್ರತಂಡ ಭಾಗ-೨ ರಲ್ಲಿ ಜನರ ನಿರೀಕ್ಷೆಗೂ ಮೀರಿ ನಿಲ್ಲಲಿದ್ಯಾ ಎಂದು ಕಾದು ನೋಡಬೇಕಾಗಿದೆ.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles