ನವದೆಹಲಿ: ಮಹಾಭಾರತ ಧಾರವಾಹಿಯಲ್ಲಿ ಭೀಮನ ಪಾತ್ರ ಮಾಡಿದ್ದ ನಟ ಪ್ರವೀಣ್ ಕುಮಾರ್ ಸೋಬ್ಟಿ(74) ಹೃದಯಾಘಾತದಿಂದ ಸೋಮವಾರ ತಡರಾತ್ರಿ ಅಶೋಕ್ ವಿಹಾರ್‌ದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.
ನಟ ಪ್ರವೀಣ್ ಕುಮಾರ್ ನಟನೆ ಮಾತ್ರವಲ್ಲದೇ ಉತ್ತಮ ಕ್ರೀಡಾಪಟು ಆಗಿ ಕೂಡ ಗಮನ ಸೆಳೆದಿದ್ದರು. 1966 ಮತ್ತು 1970ರಲ್ಲಿ ನಡೆದ ಏಷ್ಯಾ ಕ್ರೀಡಾಕೂಟದಲ್ಲಿ ಚಿನ್ನದ ಪದಕ ವಿಜೇತರಾಗಿದ್ದರು. ಮೃತರು ಪತ್ನಿ, ಪುತ್ರಿ, ಇಬ್ಬರು ಸಹೋದರರು ಹಾಗೂ ಓರ್ವ ಸಹೋದರಿಯನ್ನು ಅಗಲಿದ್ದಾರೆ.