Saturday, June 7, 2025

ಮಂಗಳೂರು: ಬಲೆಗೆ ಬಿದ್ದ ಅಪರೂಪದ ಫ್ಲೆಯಿಂಗ್ ಫಿಶ್

ಮಂಗಳೂರು: ಅಪರೂಪದ ಎರಡು ಫ್ಲೆಯಿಂಗ್ ಫಿಶ್ ಗಳು ಮಂಗಳೂರಿನ ಮೀನುಗಾರರ ಬಲೆಗೆ ಬಿದ್ದಿವೆ.

ಫ್ಲೆಯಿಂಗ್ ಫಿಶ್ ಗಳು ಎರಡು ದಿನಗಳ ಹಿಂದೆ ದಡಕ್ಕೆ ಬಂದಿದ್ದ ಮೀನಿನ ರಾಶಿಯಲ್ಲಿ ಸಿಕ್ಕಿವೆ. ಸಾಮಾನ್ಯವಾಗಿ 15 ರಿಂದ 45 ಸೆಂ.ಮೀ ಬೆಳೆಯುವ ಈ ಮೀನುಗಳು ಬಲೆಗೆ ಬೀಳುವುದು ಅಪರೂಪ. ಬೇರೆ ಮೀನುಗಳಿಗೆ ಹೋಲಿಸಿದರೆ ಫ್ಲೆಯಿಂಗ್ ಫಿಶ್ ಗಳು ಹೆಚ್ಚು ರುಚಿಕರವಾಗಿರುತ್ತದೆ. ಆದರೆ ಅದನ್ನು ಈ ಭಾಗದಲ್ಲಿ ಹಿಡಿಯುವುದು ಕಡಿಮೆ ಎಂದು ಮೀನುಗಾರರೊಬ್ಬರು ತಿಳಿಸಿದ್ದಾರೆ.

ಫ್ಲೆಯಿಂಗ್ ಫಿಶ್ ಗೆ ತುಳುವಿನಲ್ಲಿ ಪಕ್ಕಿಮೀನ್ ಎನ್ನುತ್ತಾರೆ. ಈ ಮೀನುಗಳು ಹೆಚ್ಚಾಗಿ ಸಮುದ್ರದ ಆಳದಲ್ಲಿ ಇರುವಂತಹ ಮತ್ಸ್ಯ ಪ್ರಭೇದವಾಗಿದ್ದು, ಇವುಗಳಿಗೆ ಹಕ್ಕಿಯಂತೆ ರೆಕ್ಕೆಗಳಿರುತ್ತವೆ. ಈ ಮೀನುಗಳು ರೆಕ್ಕೆ ಹಾಗೂ ದೇಹದ ಎಲುಬುಗಳ ವಿಭಿನ್ನ ರಚನೆಯಿಂದ ನೀರಿನ ಮೇಲೆ ಎಗರಿ ಕೆಲ ಸಮಯ ಹಕ್ಕಿಗಳಂತೆ ಹಾರುವ ಸಾಮರ್ಥ್ಯ ಹೊಂದಿದೆ.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles