Saturday, June 21, 2025

ಮಾ.20 ರಾಜ್ಯಮಟ್ಟದ ಜಲಜಾನಪದೋತ್ಸವ

ಉಡುಪಿ: ಆಧುನಿಕ ವಿಜ್ಞಾನದ ಸಂಕೀರ್ಣ ಯುಗದಲ್ಲಿ ಕನ್ನಡ ಜಾನಪದ ಪರಿಷತ್ ಜಲ ಜಾನಪದಕ್ಕೆ ಸಂಬಂಧಿಸಿ ಎರಡನೇ ಕಾರ್ಯಕ್ರಮವನ್ನು ಮರವಂತೆಯಲ್ಲಿ ಮಾ.20ರಂದು ಆಯೋಜಿಸಲಾಗುತ್ತಿದೆ ಎಂದು ಕ.ಜಾ.ಪ ಕರಾವಳಿ ವಿಭಾಗ ಸಂಚಾಲಕರಾದ ಡಾ.ಭಾರತಿ ಮರವಂತೆ ಹೇಳಿದರು.

ಕುಂದಾಪುರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ಜಾನಪದ ಪರಿಷತ್ ಬೆಂಗಳೂರು, ಕನ್ನಡ ಜಾನಪದ ಯುವಬ್ರಿಗೇಡ್ ಬೆಂಗಳೂರು, ಕರಾವಳಿ ವಿಭಾಗೀಯ ಘಟಕ ಮರವಂತೆ ಮತ್ತು ಲಯನ್ಸ್ ಕ್ಲಬ್ ಕೋಸ್ಟಲ್ ಕುಂದಾಪುರ ಉಡುಪಿ ಜಿಲ್ಲೆ ಇವರ ಸಹಕಾರದೊಂದಿಗೆ ರಾಜ್ಯಮಟ್ಟದ ಜಲಜಾನಪದೋತ್ಸವ ಮರವಂತೆ ರಾಷ್ಟ್ರೀಯ ಹೆದ್ದಾರಿಯ ಸಮುದ್ರ ಕಿನಾರೆಯ ಸಮೀಪ ನಡೆಯಲಿದೆ ಎಂದರು.

ಮರವಂತೆ ಗ್ರಾ.ಪಂ ಅಧ್ಯಕ್ಷೆ ರುಕ್ಮಿಣಿ ಧ್ವಜಾರೋಹಣ ನೆರವೇರಿಸಲಿದ್ದಾರೆ. ಬಳಿಕ ಸಮುದ್ರ ಪೂಜೆ-ನದಿ ಪೂಜೆ ನಡೆಯಲಿದೆ. ಜಲ ಜಾನಪದ ಮೆರವಣಿಗೆ ನಡೆಯಲಿದೆ. ಜಲಜಾನಪದೋತ್ಸವವನ್ನು ಬಂದರು ಒಳನಾಡು ಸಾರಿಗೆ ಮತ್ತು ಮೀನುಗಾರಿಕೆ ಇಲಾಖೆ ಸಚಿವ ಎಸ್.ಅಂಗಾರ, ಜಾನಪದ ಗೀತೆಗಳ ಸ್ಪರ್ಧೆಯನ್ನು ಇಂಧನ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್, ಪುಸ್ತಕ ಪ್ರದರ್ಶನವನ್ನು ಸಂಸದ ಬಿ.ವೈ.ರಾಘವೇಂದ್ರ, ಪಾರಂಪರಿಕ ವಸ್ತು ಪ್ರದರ್ಶನವನ್ನು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಕನ್ನಡ ಜಾನಪದ ಪರಿಷತ್ ಜಾನಪದ ಯುವ ಬಿಗ್ರೇಡ್ ಬೆಂಗಳೂರು ಇದರ ರಾಜ್ಯಾಧ್ಯಕ್ಷ ಡಾ.ಎಸ್.ಬಾಲಾಜಿ ವಹಿಸಲಿದ್ದಾರೆ ಎಂದರು.
ಪೂರ್ವಾಹ್ನ 11-30ರಿಂದ ಜನಪದ ಕಲಾ ಪ್ರದರ್ಶನ, 12-30ರಿಂದ ಸಾಧಕರಿಗೆ ಸನ್ಮಾನ, ವಿಶೇಷ ಗೌರವ ಸಮರ್ಪಣೆ, ಮಧ್ಯಾಹ್ನ 1 ಗಂಟೆಗೆ ಜಾನಪದ ಹಾಡುಗಳ ಸ್ಪರ್ಧೆ, ಕೊರಗರ ಸಾಂಸ್ಕೃತಿಕ ವೈಭವ, ಅಪರಾಹ್ನ 3.30ಕ್ಕೆ ಜಲಜಾನಪದ ಗೋಷ್ಠಿ, 5 ಗಂಟೆಯಿಂದ ಕೋಲಾಟ ಮತ್ತು ಗುಮಟೆ ನೃತ್ಯ, ಸಂಜೆ 6 ಗಂಟೆಗೆ ಸಮಾರೋಪ ಸಮಾರಂಭ ಮತ್ತು ಬಹುಮಾನ ವಿತರಣೆ, ಜಾನಪದ ಶೈಲಿಯಲ್ಲಿ ಸ್ತಬ್ದಚಿತ್ರ ಪ್ರದರ್ಶನ, ಕುಂದಗನ್ನಡ ಹಾಸ್ಯಲಹರಿ ನಡೆಯಲಿದೆ ಎಂದರು.
ಹಿಂದುಳಿದ ವರ್ಗ ಮತ್ತು ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಸಮಾರೋಪ ಭಾಷಣ ಮಾಡಲಿದ್ದಾರೆ. ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ರಾತ್ರಿ 9ರಿಂದ ಕ್ಯಾದಗಿ ಸಾರಥ್ಯದಲ್ಲಿ ಯಕ್ಷಹಾಸ್ಯ ವೈಭವ ನಡೆಯಲಿದೆ ಎಂದರು.
ಸುದ್ಧಿಗೋಷ್ಠಿಯಲ್ಲಿ ಜಲಜಾನದೋತ್ಸವದ ಸಮಿತಿ ಗೌರವ ಸಲಹೆಗಾರ ಪ್ರೊ.ಕನರಾಡಿ ವಾದಿರಾಜ್ ಭಟ್, ಲಯನ್ಸ್ ಕ್ಲಬ್ ಕೋಸ್ಟಲ್ ಕುಂದಾಪುರ ಇದರ ಅಧ್ಯಕ್ಷ ಜಯಶೀಲ ಶೆಟ್ಟಿ, ಜಲಜಾನಪದೋತ್ಸವ ಕಾರ್ಯಕಾರಿ ಸಮಿತಿ ಸಂಚಾಲಕ ದಯಾನಂದ ಬಳೆಗಾರ್ ಮೊದಲಾದವರು ಉಪಸ್ಥಿತರಿದ್ದರು.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest


0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles