Sunday, June 8, 2025

ಉಕ್ರೇನ್‌ನಲ್ಲಿ ಮದುವೆ, ಹೈದರಾಬಾದ್‌ನಲ್ಲಿ ಆರತಕ್ಷತೆ ಮಾಡಿಕೊಂಡ ವಧು

ಹೈದರಾಬಾದ್: ಉಕ್ರೇನ್‌ನ ಯುವತಿ ಮದುವೆಯಾಗಿದ್ದು ತನ್ನ ದೇಶದಲ್ಲೇ ಆದರೂ, ಆರತಕ್ಷತೆ ಮಾಡಿಕೊಂಡಿರುವುದು ಮಾತ್ರ ಭಾರತದ ಹೈದರಾಬಾದ್‌ನಲ್ಲಿ. ಇದಕ್ಕೆ ಕಾರಣ ರಷ್ಯಾ ಹಾಗೂ ಉಕ್ರೇನ್‌ ನಡುವಿನ ಯುದ್ಧ.

ಲ್ಯೂಬೊವ್ ಎಂಬ ಉಕ್ರೇನ್‌ನ ಯುವತಿ ಹೈದರಾಬಾದ್‌ನ ಪ್ರತೀಕ್‌ ಎಂಬುವವರನ್ನು ಫೆ.23 ಅಂದರೆ ರಷ್ಯಾ ಉಕ್ರೇನ್‌ ಮೇಲೆ ದಾಳಿ ಮಾಡಿದ ಹಿಂದಿನ ದಿನ ಉಕ್ರೇನ್‌ನಲ್ಲಿ ಮದುವೆಯಾಗಿದ್ದರು. ಈಕೆ ಯುದ್ಧದಿಂದಾಗಿ ವರನ ಊರಾದ ಹೈದ್ರಾಬಾದ್‌ಗೆ ಆಗಮಿಸಿ ವರನ ಸ್ನೇಹಿತರು, ಬಂಧು-ಬಳಗದವರ ಉಪಸ್ಥಿತಿಯಲ್ಲಿ ಆರತಕ್ಷತೆ ಮಾಡಿಕೊಂಡಿದ್ದಾರೆ.

ವಿಶೇಷವೆಂದರೆ ಇವರ ಆರತಕ್ಷತೆಯಲ್ಲಿ ಅರ್ಚಕರು ರಷ್ಯಾ-ಉಕ್ರೇನ್ ಯುದ್ಧ ಕೊನೆಗೊಳ್ಳಲಿ ಎಂದು ಪ್ರಾರ್ಥಿಸಿರುವುದು ಎಲ್ಲರ ಗಮನ ಸೆಳೆದಿದೆ.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles