ಉಡುಪಿ: ಪರ್ಕಳದ ಹೃದಯಭಾಗದಲ್ಲಿರುವ ಮೆಡಿಕಲ್ ಶಾಪಿನ ಮಾಲಕ ವಾಮನ ನಾಯಕ್ ಉಡುಪಿಯ ಕಡಿಯಾಳಿಯಲ್ಲಿ ಶುಕ್ರವಾರ ನಡೆದ ರಸ್ತೆ ಅಪಘಾತದಲ್ಲಿ ಮೃತ ಪಟ್ಟಿದ್ದಾರೆ.
ಅಪಘಾತದಲ್ಲಿ ವಾಮನ ನಾಯಕ್ ಅವರ ತಲೆಗೆ ತೀವ್ರ ಏಟಾಗಿದೆ. ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ನಂತರ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾರೆ.
ವಾಮನ ನಾಯಕ್ ಅವರು ಉತ್ತಮ ಭಜನೆ ಭಕ್ತಿಗೀತೆ, ಹಾಗೂ ಸಂಗೀತದ ಪರಿಕರಗಳನ್ನು ನುಡಿಸುತ್ತಿದ್ದರು. ಉಡುಪಿಯ ಸುತ್ತಮುತ್ತ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹಾಡುವ ಮೂಲಕ ಜನಪ್ರಿಯರಾಗಿದ್ದರು. ಅಪಘಾತ ಮಾಡಿದ ಚಾಲಕ ಸ್ಥಳದಲ್ಲಿ ವಾಹನ ನಿಲ್ಲಿಸದೆ ಪರಾರಿಯಾಗಿದ್ದಾನೆ. ಪ್ರಥಮ ಮಾಹಿತಿಯ ಮೂಲಕ ಹಿಟ್ ಅಂಡ್ ರನ್ ಕೇಸ್ ದಾಖಲಾಗಿದೆ ಎಂದು ತಿಳಿದು ಬಂದಿದೆ.