ಪೋರ್ಟೊ ರಿಕೊ: 70ನೇ ಆವೃತ್ತಿಯ 2021ರ ಮಿಸ್ ವರ್ಲ್ಡ್ ಸ್ಪರ್ಧೆಯು ಪೋರ್ಟೊ ರಿಕೊದ ಸ್ಯಾನ್ ಜುವಾನ್ನಲ್ಲಿ ನಡೆದಿದ್ದು, ಪೋಲೆಂಡ್ನ ಕರೋಲಿನಾ ಬಿಲಾವ್ಸ್ಕಾ ಅವರು ವಿಶ್ವ ಸುಂದರಿಯಾಗಿ ಹೊರಹೊಮ್ಮಿದ್ದಾರೆ.
2019 ರ ವಿಶ್ವ ಸುಂದರಿ ಜಮೈಕಾದ ಟೋನಿ-ಆನ್ ಸಿಂಗ್ ಕರೋಲಿನಾಗೆ ಕಿರೀಟವನ್ನು ತೊಡಿಸಿದ್ದು, ಯುಎಸ್ಎ, ಇಂಡೋನೇಷ್ಯಾ, ಮೆಕ್ಸಿಕೋ, ಉತ್ತರ ಐರ್ಲೆಂಡ್ ಮತ್ತು ಕೋಟ್ ಡಿ ಐವೊರ್ ದೇಶಗಳ ಸ್ಪರ್ಧಿಗಳನ್ನು ಮಣಿಸಿ ಈ ಬಾರಿಯ ವಿಶ್ವ ಸುಂದರಿ ಕಿರೀಟವನ್ನು ಕರೋಲಿನಾ ತಮ್ಮದಾಗಿಸಿಕೊಂಡಿದ್ದಾರೆ. ಕರೋಲಿನಾ ಪ್ರಸ್ತುತ ಮ್ಯಾನೇಜ್ಮೆಂಟ್ನಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದು, ಇದರ ಜೊತೆಗೆ ಮಾಡೆಲ್ ಆಗಿ ಕೂಡ ಕೆಲಸ ಮಾಡುತ್ತಿದ್ದಾರೆ.
ಭಾರತದ ಪರವಾಗಿ ವಿಶ್ವ ಸುಂದರಿ ಸ್ವರ್ಧೆಯಲ್ಲಿ ಭಾಗವಹಿಸಿದ್ದ ಮಾನಸಾ ವಾರಣಾಸಿ ಅವರು 6ನೇ ಸ್ಥಾನ ಪಡೆದುಕೊಂಡಿದ್ದಾರೆ.