ಮೂಡುಬಿದಿರೆ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ದ.ಕ ಜಿ.ಪಂ. ಮಂಗಳೂರು, ತಾ.ಪಂ. ಮೂಡುಬಿದಿರೆ ಇದರ ವತಿಯಿಂದ ಮೂಡುಬಿದಿರೆ ತಾ.ಪಂ. ಸಭಾಂಗಣದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಮಂಗಳವಾರ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 100 ಮಾನವ ದಿನ ಸೃಜನೆ ಮಾಡಿ ಸಾಧನೆಗೈದ ಇಬ್ಬರು ಮಹಿಳಾ ಫಲಾನುಭವಿಗಳಾದ ಗೀತಾಂಜಲಿ ಹಾಗೂ ನಿರ್ಮಲ ಜೈನ್ ಇವರನ್ನು ಗೌರವಿಸಿ, ಸನ್ಮಾನಿಸಲಾಯಿತು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಮಹಿಳಾ ದಿನಾಚರಣೆ ಅಂಗವಾಗಿ ಸಂಚರಿಸುವ ಮಾಹಿತಿ ರಥವನ್ನು ಸ್ವಾಗತಿಸಿ, ಪ್ರಮಾಣ ವಚನ ಸ್ವೀಕರಿಸಿ, ಬಳಿಕ ಸಹಿ ಆಂದೋಲನ ನಡೆಯಿತು.
ಈ ಸಂದರ್ಭ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ದಯಾವತಿ.ಎಂ., ಮೂಡುಬಿದಿರೆ ತಹಶೀಲ್ದಾರ ಪುಟ್ಟರಾಜು, ಕ್ಷೇತ್ರ ಆರೋಗ್ಯಾಧಿಕಾರಿ ಸುಶೀಲಾ, ಶಿಶು ಅಭಿವೃದ್ಧಿ ಯೋಜನೆ (ಗ್ರಾ) ಮೇಲ್ವಿಚಾರಕಿ ಭಾರತಿ ಹಾಗೂ ತಾಲೂಕು ಐಇಸಿ ಅನ್ವಯ, ಎಂ.ಐಎಸ್ ಸುಶ್ಮಿತಾ, ತಾಂತ್ರಿಕ ಸಂಯೋಜಕ ನಳೀನ್, ಅಂಗನವಾಡಿ ಕಾರ್ಯಕರ್ತೆಯರು, ಗ್ರಾ.ಪಂ. ಸಿಬ್ಬಂದಿಗಳು ಹಾಗೂ ತಾ.ಪಂ. ಸಿಬ್ಬಂದಿಗಳು ಉಪಸ್ಥಿತರಿದ್ದರು.