Friday, June 20, 2025

9 ಲಕ್ಷಕ್ಕೂ ಹೆಚ್ಚು ಜನರಿಗೆ ‘ಮುನ್ನೆಚ್ಚರಿಕೆ ಡೋಸ್

ನವದೆಹಲಿ: ಜನವರಿ 10 ರಂದು ‘ಮುನ್ನೆಚ್ಚರಿಕೆ ಡೋಸ್’ ಅನ್ನು ದೇಶದಾದ್ಯಂತ ನೀಡಲಾಗಿದೆ. ಈ ಡೋಸ್ ಅನ್ನು ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಮತ್ತು ಅರವತ್ತಕ್ಕೂ ಹೆಚ್ಚು ವರ್ಷ ವಯಸ್ಸಿನ ವ್ಯಕ್ತಿಗಳಿಗೆ ನೀಡಲಾಗುತ್ತದೆ. ಲಸಿಕೆಗೆ ಚಾಲನೆ ನೀಡಿದ ಮೊದಲ ದಿನವೆ ಒಂಬತ್ತು ಲಕ್ಷಕ್ಕೂ ಹೆಚ್ಚು ಜನರು ಲಸಿಕೆಯನ್ನು ಪಡೆದಿದ್ದಾರೆ.

ಕೇಂದ್ರ ಆರೋಗ್ಯ ಸಚಿವಾಲಯವು ಅರ್ಹ ವಯಸ್ಸಿನವರಿಗೆ 9 ಲಕ್ಷಕ್ಕೂ ಹೆಚ್ಚು ಡೋಸ್‌ಗಳನ್ನು ನೀಡಲಾಗಿದೆ ಎಂದು ತಿಳಿಸಿದೆ. ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ‘ವೈದ್ಯರ ಸಲಹೆಯ ಮೇರೆಗೆ ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರು ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮುನ್ನೆಚ್ಚರಿಕೆ ಡೋಸ್’ ಅನ್ನು ನೀಡುವ ಕಾರ್ಯಕ್ರಮವು ಇಂದಿನಿಂದ ದೇಶಾದ್ಯಂತ ಪ್ರಾರಂಭವಾಗುತ್ತಿದೆ’ ಎಂದು ಹೇಳಿದರು.

ಕೋ-ವಿನ್ ಪೋರ್ಟಲ್ ಮೊದಲ ದಿನದಲ್ಲಿ ‘ಮುನ್ನೆಚ್ಚರಿಕೆ ಡೋಸ್’ ಪಡೆಯಲು ಫಲಾನುಭವಿಗಳಿಗೆ ಒಂದು ಕೋಟಿಗೂ ಹೆಚ್ಚು ಜ್ಞಾಪನೆ ಸಂದೇಶಗಳನ್ನು ಕಳುಹಿಸಿದೆ. ಕೋ-ವಿನ್ ಪೋರ್ಟಲ್ ಮೂಲಕ ‘ಮುನ್ನೆಚ್ಚರಿಕೆ ಡೋಸ್’ ಗೆ ಅಪಾಯಿಂಟ್‌ಮೆಂಟ್‌ಅನ್ನು ಆನ್‌ಲೈನ್ ಬುಕ್ ಮಾಡಬಹುದಾಗಿದೆ. ಈ ಮುನ್ನೆಚ್ಚರಿಕೆ ಡೋಸ್‌ಗಾಗಿ ಹೊಸ ನೋಂದಣಿ ಅಗತ್ಯವಿಲ್ಲ ಎಂದು ಸಚಿವಾಲಯ ತಿಳಿಸಿದೆ.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest


0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles