ನವದೆಹಲಿ: ಪ್ರಧಾನಿ ಮೋದಿಯನ್ನು ದೇಶದ 20ಮಿಲಿಯನ್ನು ಕೊಲ್ಲುವುದಾಗಿ ಅನಾಮಿಕ ವ್ಯಕ್ತಿಯೊಬ್ಬ ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎಎನ್‌ಐ) ಬೆದರಿಕೆ ಇ-ಮೇಲ್ ಕಳುಹಿಸಿದ್ದು, ಕೂಡಲೇ ಭದ್ರತಾ ಸಂಸ್ಥೆಗಳು ತನಿಖೆಯನ್ನು ಪ್ರಾರಂಭಿಸಿವೆ.
ಈ ಪತ್ರದಲ್ಲಿ “ಕನಿಷ್ಠ 20 ಸ್ಲೀಪರ್ ಸೆಲ್‌ಗಳು ಹತ್ಯೆಗೆ ಸಿದ್ಧಗೊಂಡಿದ್ದು, ಸುಮಾರು 20 ಕೆಜಿ ತೂಕದ ಆರ್‌ಡಿಎಕ್ಸ್ ಸಂಗ್ರಹವಿದೆ. ಈಗಾಗಲೇ ಹತ್ಯೆಗೆ ಯೋಜನೆ ಸಿದ್ಧವಾಗಿದ್ದು, ಯೋಜನೆ ಕಾರ್ಯ ರೂಪಕ್ಕೆ ತರಲು ಕಾಯುತ್ತಿದ್ದೇನೆ. ವಿವಿಧ ಭಯೋತ್ಪಾದನಾ ಸಂಘಟನೆಗಳು ಕೂಡ ಯೋಜನೆಗೆ ಕೈಜೋಡಿಸಿವೆ. ಅವರು ನನಗೆ ಆರ್‌ಡಿಎಕ್ಸ್ ಬಾಂಬ್ ನೀಡಿ ಸಹಾಯ ಮಾಡಲಿದ್ದಾರೆ. ಫೆಬ್ರವರಿ 28ರಿಂದಲೇ 20 ಸ್ಲೀಪರ್ ಸೆಲ್‌ಗಳನ್ನು ಸಕ್ರಿಯಗೊಳಿಸಿದ್ದೇನೆ. ಮತ್ತು ಲಕ್ಷಾಂತರ ಮಂದಿ ಸಾಯಲಿದ್ದಾರೆ.”
“ಪ್ರಧಾನಿ ಮೋದಿಯನ್ನು ಎಷ್ಟು ಸಾಧ್ಯವೋ ಅಷ್ಟು ಬೇಗನೆ ಕೊಲ್ಲುತ್ತೇನೆ. ಅವರು ನನ್ನ ಜೀವನ ಹಾಳು ಮಾಡಿದ್ದಾರೆ. ಯಾರನ್ನೂ ಬಿಡುವುದಿಲ್ಲ. 20 ಮಿಲಿಯನ್‌ಗೂ ಅಧಿಕ ಜನರನ್ನು ಕೊಲ್ಲಲಿದ್ದೇನೆ. ಈ ಕೆಲಸ ಮಾಡುವ ಜನರೊಂದಿಗೆ ತಾನು ಸಂಪರ್ಕದಲ್ಲಿದ್ದೇನೆ. ದೇಶದಲ್ಲಿ ಭಾರಿ ದೊಡ್ಡ ದುರಂತ ಸೃಷ್ಟಿಸುತ್ತೇನೆ” ಎಂದು ಇಮೇಲ್ ಕಳುಹಿಸಿದ್ದಾನೆ.