ಕೀವ್: ಉಕ್ರೇನ್ ವಿರುದ್ಧ ರಷ್ಯಾ ಯುದ್ದ ಸಾರಿ 1 ತಿಂಗಳು ಕಳೆದ ಹಿನ್ನಲೆ ವಿಶ್ವದಾಂದ್ಯಂತ ಜನರು ಬೀದಿಗಿಳಿದು ರಷ್ಯಾ ವಿರುದ್ಧ ಪ್ರತಿಭಟನೆ ನಡೆಸಬೇಕೆಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆನೆಸ್ಕಿ ಮನವಿ ಮಾಡಿದ್ದಾರೆ.
ಇಂದು ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿ 1ತಿಂಗಳಾದ ಹಿನ್ನಲೆ ಉಕ್ರೆನ್ ಅಧ್ಯಕ್ಷ ಝೆನೆಸ್ಕಿ ವಿಡಿಯೋ ಸಂದೇಶ ಬಿಡುಗಡೆ ಮಾಡಿದ್ದಾರೆ. ರಷ್ಯಾದ ಯುದ್ಧವು ಉಕ್ರೇನ್ ವಿರುದ್ಧ ಮಾತ್ರವಲ್ಲ ಸ್ವಾತಂತ್ರ್ಯದ ವಿರುದ್ಧವಾಗಿದೆ. ಆದ್ದರಿಂದ ಈ ಯುದ್ಧವನ್ನು ಎಲ್ಲರೂ ಒಟ್ಟಾಗಿ ಖಂಡಿಸಬೇಕು ಎಂದು ಝೆನೆಸ್ಕಿ ವಿಡಿಯೋದಲ್ಲಿ ಹೇಳಿದ್ದಾರೆ. ಈ ವಿಡಿಯೋವನ್ನು ಉಕ್ರೇನ್‌ನ ವಿದೇಶಾಂಗ ಸಚಿವಾಲಯ ಹಂಚಿಕೊಂಡಿದೆ.