ನವದೆಹಲಿ: ನಾಗರಿಕ ವಿಮಾನಯಾನ ಸುರಕ್ಷತ ಬ್ಯೂರೋ (ಬಿಸಿಎಎಸ್) ಇನ್ನು ಮುಂದೆ ದೇಶೀಯ ವಿಮಾನಗಳಲ್ಲಿ ಪ್ರಯಾಣ ಮಾಡುವವರು ಕೇವಲ ಒಂದು ಹ್ಯಾಂಡ್ ಬ್ಯಾಗ್ ಅನ್ನು ಮಾತ್ರ ತೆಗೆದುಕೊಂಡು ಹೋಗಬಹುದು ಎಂಬ ಹೊಸ ನಿಯಮವನ್ನು ಜಾರಿಗೆ ತಂದಿದೆ.
ಪ್ರಯಾಣಿಕರು ಒಂದಕ್ಕಿಂತ ಹೆಚ್ಚು ಬ್ಯಾಗ್ ಗಳನ್ನು ತಂದಲ್ಲಿ ಏರ್‌ಲೈನ್‌ಗಳು ಅದನ್ನು ನೋಡಿಕೊಳ್ಳಬೇಕು. ಈ ಕುರಿತು ಟಿಕೆಟ್ ಗಳಲ್ಲಿ ಹಾಗೂ ಏರ್‌ಪೋರ್ಟ್‌ನಲ್ಲಿ ಮಾಹಿತಿ ನೀಡಬೇಕಾಗುತ್ತದೆ. ಹೆಚ್ಚು ಬ್ಯಾಗ್ ಗಳನ್ನು ತಂದಲ್ಲಿ ಅವುಗಳನ್ನು ಪರಿಶೀಲನೆ ಮಾಡಲು ಹೆಚ್ಚು ಸಮಯ ಬೇಕಾಗುತ್ತದೆ. ಜನರ ಸುರಕ್ಷತ ದೃಷ್ಟಿಯಿಂದ ಈ ನಿಯಮ ಜಾರಿಗೆ ತರಲಾಗಿದೆ ಎಂದು ಬಿಸಿಎಎಸ್ ತಿಳಿಸಿದೆ.