ಸಿಡ್ನಿ: ಪೆಸಿಫಿಕ್ ನ ದ್ವೀಪ ದೇಶಗಳಾದ ಸಮೋಆ ಮತ್ತು ಕಿರಿಬಾಟಿಯಲ್ಲಿ ಲಾಕ್ ಡೌನ್ ಮಾಡಲಾಗಿದೆ. ಕಳೆದ ಎರಡು ವರ್ಷಗಳಿಂದ ಈ ದೇಶಗಳಲ್ಲಿ ಒಂದೇ ಒಂದು ಕೊರೋನಾ ಪ್ರಕರಣಗಳು ಪತ್ತೆಯಾಗಿಲ್ಲ. ಆದರೆ ಈಗ ಈ ದೇಶಗಳಲ್ಲಿ ಎರಡು ಪ್ರಕರಣಗಳು ಪತ್ತೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ಬ್ರಿಸ್ಬೇನ್ ನಿಂದ ಸಮೋಆಕ್ಕೆ ಬಂದ ಪ್ರಯಾಣಿಕರಲ್ಲಿ 15 ಜನರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಆದ್ದರಿಂದ ನಿರ್ಬಂಧಗಳನ್ನು ಜಾರಿ ಮಾಡಲಾಗಿದೆ ಎಂದು ಪ್ರಧಾನ ಮಂತ್ರಿ ಫಿಯಾಮ್ ನವೋಮಿ ಮತಾಫಾ ಅವರು ತಿಳಿಸಿದ್ದಾರೆ.
ಫಿಜಿ ಇಂದ ಕಿರಿಬಾಟಿಗೆ ಬಂದ ಅಂತರಾಷ್ಟ್ರೀಯ ಪ್ರಯಾಣಿಕರಲ್ಲಿ ಕೊರೋನಾ ಕಾಣಿಸಿ ಕೊಂಡಿರುವುದರಿಂದ ದೇಶದಲ್ಲಿ ಎಚ್ಚರಿಕೆವಹಿಸಲಾಗಿದೆ. ಇದರಿಂದ ಜನರಿಗೆ ಮನೆಯಲ್ಲಿಯೇ ಇರುವಂತೆ ಸೂಚನೆ ನೀಡಲಾಗಿದೆ. ವಿಮಾನಯಾನ ನಿರ್ಬಂಧಗಳು ತೆರವಾದ ಮೇಲೆ ಕಿರಿಬಾಟಿಗೆ ಬಂದ ಮೊದಲ ವಿಮಾನ ಇದಾಗಿದೆ.
ಕಿರಿಬಾಟಿಯಾದ ಜನಸಂಖ್ಯೆ 1,20,000 ಆಗಿದ್ದು, ಇದರ ಅರ್ಧ ದಷ್ಟು ಜನರು ರಾಜಧಾನಿಯಲ್ಲಿ ಇರುವ ಕಾರಣ ನಿರ್ಬಂಧ ಜಾರಿಮಾಡಲಾಗಿದೆ. ಇದರ ಅನುಸಾರ ಆಹಾರ ಮತ್ತು ಔಷಧಿ ಖರೀದಿಸಲು ಹೊರತು ಪಡಿಸಿ ಇತರೆ ಕಾರಣಗಳಿಗಾಗಿ ಮನೆಯಿಂದ ಹೊರಬರುವಂತಿಲ್ಲ.