Sunday, June 8, 2025

ವಿದೇಶಾಂಗ ಸಚಿವಾಲಯದಲ್ಲಿ ಇಂಟರ್ನ್ ಶಿಪ್‌ಗೆ ಅವಕಾಶ:ಅರ್ಜಿ ಸಲ್ಲಿಕೆಗೆ ಫೆ.15 ಕೊನೆಯ ದಿನಾಂಕ

ನವದೆಹಲಿ: ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ 75ವರ್ಷಗಳ ಸ್ವಾತಂತ್ರ್ಯದ ಸ್ಮರಣಾರ್ಥ ಆಜಾದಿ ಕಾ ಅಮೃತ್ ಮಹೋತ್ಸವ ಆಚರಣೆಯ ಭಾಗವಾಗಿ ವಿದ್ಯಾರ್ಥಿಗಳಿಗೆ ಇಂಟರ್ನ್ ಶಿಪ್‌ನ್ನು ಏರ್ಪಡಿಸುತ್ತಿದೆ.


ಇಂಟರ್ನ್ ಶಿಪ್‌ನ ಅವಧಿ ಏಪ್ರಿಲ್‌ನಿಂದ ಆರಂಭವಾಗಿ ಜೂನ್‌ನರೆಗೆ ಮೂರು ತಿಂಗಳಕಾಲ ಇರಲಿದೆ. ನವದೆಹಲಿಯಲ್ಲಿ ನಡೆಯುವ ಈ ಯೋಜನೆಯಡಿಯಲ್ಲಿ ಸಚಿವಾಲಯವು ಕೇವಲ 75 ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲಿದೆ. ಇಂಟರ್ನ್ ಶಿಪ್‌ಗೆ ಅರ್ಜಿಯನ್ನು ಸಲ್ಲಿಸಲು ಫೆ.15 ಕೊನೆಯ ದಿನಾಂಕವಾಗಿದೆ.


ಇದರಲ್ಲಿ ಅಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 10,000 ರೂ. ನೀಡಲಿದ್ದು, ಅಭ್ಯರ್ಥಿಗಳ ಪ್ರಯಾಣ ದರವನ್ನೂ ಕೂಡ ಸಚಿವಾಲಯವೇ ಭರಿಸಲಿದೆ. ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿಯನ್ನು ಪಡೆದಿರಬೇಕು, ಅಲ್ಲದೇ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳೂ ಕೂಡ ಇಂಟರ್ನ್ ಶಿಪ್‌ಗೆ ಅವಕಾಶ ನೀಡಲಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯೋಮಿತಿ 25 ವರ್ಷವನ್ನು ಮೀರಿರಬಾರದು ಎಂದು ತಿಳಿಸಲಾಗಿದೆ.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles