Sunday, June 8, 2025

ರೋಟರಿ ಕ್ಲಬ್ ಮತ್ತು ಸಮುದಾಯ ಆರೋಗ್ಯ ಕೇಂದ್ರದಿಂದ ಪಲ್ಸ್ ಪೋಲಿಯೊ ಅಭಿಯಾನ

ಮೂಡುಬಿದಿರೆ: ರೋಟರಿ ಕ್ಲಬ್ ಮತ್ತು ಸಮುದಾಯ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಪಲ್ಸ್ ಪೋಲಿಯೊ ಅಭಿಯಾನವು ಮೂಡುಬಿದಿರೆಯಲ್ಲಿ ಭಾನುವಾರ ನಡೆಯಿತು.
ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್ ಮಗುವಿಗೆ ಪೋಲಿಯೋ ಹನಿಯನ್ನು ಹಾಕುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.

ತಾಲೂಕು ಆರೋಗ್ಯಾಧಿಕಾರಿ ಸುಜಯ್ ಭಂಡಾರಿ ಪಲ್ಸ್ ಪೋಲಿಯೋದ ಮಹತ್ವದ ಬಗ್ಗೆ ತಿಳಿಸಿ ಭಾರತ ಪೋಲಿಯೋ ಮುಕ್ತವಾಗಿದ್ದರೂ ಆಫ್ರಿಕಾದ ಒಂದು ಊರಿನಲ್ಲಿ ಇತ್ತೀಚೆಗೆ ಪೋಲಿಯೋ ಕಾಣಿಸಿಕೊಂಡಿರುವುದರಿಂದ ನಾವು ಎಚ್ಚೆತ್ತುಕೊಳ್ಳಬೇಕು ಎಂದರು.


ಈ ಸಂದರ್ಭ ಪಲ್ಸ್ ಪೋಲಿಯೋದ ಜಿಲ್ಲಾ ಅಧ್ಯಕ್ಷ ಡಾ.ರಮೇಶ್, ರೋಟರಿ ಕ್ಲಬ್ ಅಧ್ಯಕ್ಷ ಜೆ.ಡಬ್ಲ್ಯೂ ಪಿಂಟೋ, ಆರೋಗ್ಯ ರಕ್ಷಾ ಸಮಿತಿ ಸದಸ್ಯ ಎಂ.ಬಾಹುಬಲಿ ಪ್ರಸಾದ್, ಮಕ್ಕಳ ತಜ್ಞರಾದ ಡಾ.ಮುರಳೀಕೃಷ್ಣ, ಡಾ.ವಸಂತ್, ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಶಶಿಕಲಾ, ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಶಾಂತಮ್ಮ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಸುಶೀಲ, ರೋಟರಿ ಕ್ಲಬ್ ನ ಸದಸ್ಯರಾದ ಸಿ.ಹೆಚ್.ಗಫೂರ, ರವಿಪ್ರಸಾದ್ ಉಪಾಧ್ಯಾಯ, ಕೆ.ಆರ್.ಪಂಡಿತ್,ಸುರೇಶ್ ಜೈನ್, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಅಖಿಲಾ, ಹಿರಿಯ ದಂತ ವೈದ್ಯಾಧಿಕಾರಿ ನೆಫಿಸಾ, ಅಂಗನವಾಡಿ ಕಾರ್ಯಕರ್ತೆಯರಾದ ಜಯಂತಿ, ಪ್ರಿಯದರ್ಶಿನಿ ಮತ್ತಿತರರು ಉಪಸ್ಥಿತರಿದ್ದರು.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles