ಚಂಡೀಗಢ: ಬಾಲಿವುಡ್ ನಟ ಸೋನು ಸೂದ್ ಅವರು ಲಾಕ್ ಡೌನ್ ಸಮಯದಲ್ಲಿ ಅನೇಕ ವಲಸೆ ಕೂಲಿ, ಕಾರ್ಮಿಕರಿಗೆ ಸಹಾಯ ಮಾಡಿದ್ದಾರೆ. ಹಾಗೇ ಕೋವಿಡ್ ನಿಂದ ಅಸ್ವಸ್ಥಗೊಂಡ ರೋಗಿಗಳಿಗೆ ವೈದ್ಯಕೀಯ ಸೇವೆ ಒದಗಿಸಿ ಅವರ ಪ್ರಾಣ ಕಾಪಾಡಿದ್ದಾರೆ.
ಪಂಜಾಬ್ ಚುನಾವಣೆಯ ಅಂಗವಾಗಿ ಚುನಾವಣಾ ಆಯೋಗವು ಹಿಂದಿನ ವರ್ಷ ಸೋನು ಸೂದ್ ಅವರನ್ನು ‘ಸ್ಟೇಟ್ ಐಕಾನ್’ ಆಗಿ ಆಯ್ಕೆ ಮಾಡಿತ್ತು. ಆದರೆ ಇದೀಗ ಸೋನು ಸೂದ್ ಅವರು ಟ್ವಿಟರ್ನಲ್ಲಿ ಇನ್ನು ಮುಂದೆ ನಾನು ಪಂಜಾಬ್ ನ “ಸ್ಟೇಟ್ ಐಕಾನ್” ಆಗಿ ಮುಂದುವರಿಯುವುದಿಲ್ಲ ಎಂದು ಘೋಷಿಸಿದ್ದಾರೆ. ಇದಕ್ಕೆ ಕಾರಣ ಸೋನು ಸೂದ್ ಅವರ ಸಹೋದರಿ ಮಾಳವಿಕಾ ಸೂದ್ ಅವರು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಇದರಿಂದಾಗಿ ಅವರು “ಸ್ಟೇಟ್ ಐಕಾನ್” ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ.
ಟ್ವಿಟರ್ ನಲ್ಲಿ ಸ್ಟೇಟ್ ಐಕಾನ್ ಆಗಿ ನನ್ನ ಪ್ರಯಾಣ ಕೊನೆಗೊಳಿಸುತ್ತಿದ್ದೇನೆ. ಸ್ವಯಂ ಪ್ರೇರಿತವಾಗಿ ಈ ಹುದ್ದೆಗೆ ರಾಜೀನಾಮೆ ಕೊಡುತ್ತಿದ್ದೇನೆ. ಚುನಾವಣಾ ಆಯೋಗದೊಂದಿಗೆ ಸಮಾಲೋಚನೆ ನಡೆಸಿ ಜಂಟಿಯಾಗಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ನನ್ನ ಸಹೋದರಿಯು ಪಂಜಾಬ್ ನ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ ಎಂದು ಸೋನು ಹೇಳಿದ್ದಾರೆ.