ಕಾಸರಗೋಡು: ವ್ಲಾಗರ್ ರಿಫಾ ಮಹನು ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಪತಿ ಮಹನಾಜ್ ವಿರುದ್ಧ ಪೊಲೀಸರು ಲುಕ್‌ಔಟ್ ನೋಟಿಸ್ ಜಾರಿ ಮಾಡಿದ್ದಾರೆ.
ಹಲವು ಬಾರಿ ಮನವಿ ಮಾಡಿದರೂ ಅವರು ಪೊಲೀಸರ ತನಿಖೆಗೆ ಹಾಜರಾಗಿಲ್ಲ ಎಂದು ನೋಟಿಸ್ ನಲ್ಲಿ ಉಲ್ಲೇಖಿಸಲಾಗಿದೆ. ದುಬೈನಲ್ಲಿ ನಿಧನರಾದ ರಿಫಾ ಅವರ ಅಂತ್ಯಕ್ರಿಯೆಯನ್ನು ಮನೆಯಲ್ಲೇ ನೆರವೇರಿಸಲಾಗಿತ್ತು.
ಆಕೆಯನ್ನು ಪತಿ ಥಳಿಸಿದ್ದಾರೆ ಹಾಗೂ ಸಾವಿನಲ್ಲಿ ನಿಗೂಢತೆ ಇದೆ ಎಂದು ಸಂಬಂಧಿಕರು ದೂರು ನೀಡಿದ ಹಿನ್ನೆಲೆ ಗುರುವಾರ ರಿಫಾ ಮೃತದೇಹವನ್ನು ಹೊರತೆಗೆಯಲಾಗಿತ್ತು. ವಿಧಿವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಲಿಸಾ ಜಾನ್ ನೇತೃತ್ವದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ಇದೀಗ ರೀಪಾರ ಪತಿ ತನಿಖೆಗೆ ಹಾಜರಾಗದ ಹಿನ್ನಲೆ ಪೊಲೀಸರು ಲುಕ್ ಔಟ್ ನೋಟಿಸು ನೀಡಿದ್ದಾರೆ.
ರೀಪಾ ಮೆಹನು ಕೊಲೆ ಶಂಕೆ: ಪತಿಯ ಪತ್ತೆಗೆ ಲುಕ್ ಔಟ್ ನೋಟಿಸ್ ಜಾರಿ
Subscribe
Login
0 Comments