ಕಾರ್ಕಳ: ಕಾರು ಮತ್ತು ರಿಕ್ಷಾ ನಡುವೆ ಮುಖಾಮುಖಿ ಡಿಕ್ಕಿಯಾಗಿ ಅಪಘಾತದಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಬುಧವಾರ ಬೆಳಿಗ್ಗೆ ಕಾರ್ಕಳ ಮಿಯಾರು ಗ್ರಾಮದಲ್ಲಿ ನಡೆದಿದೆ.
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ರಿಕ್ಷಾ ಚಾಲಕ ಸಾವನ್ನಪ್ಪಿದ್ದಾರೆ. ರಿಕ್ಷಾ ಹಿಂಬದಿ ಕುಳಿತಿದ್ದ ಆತನ ಸಂಬಂಧಿ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ಸರ್ಕಾರಿ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಿಸಲಾಗಿತ್ತು, ಬಳಿಕ ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಸಾಗಿಸಲಾಗಿದೆ. ಮೃತರನ್ನು ಬಜಗೋಳಿ ನಿವಾಸಿ ಶೇಖರ ಎಂದು ಗುರುತಿಸಲಾಗಿದೆ.
ವರದಿ-ವೀಣಾ ಸುಕೇಶ್ ಕಲ್ಯ, ಕಾರ್ಕಳ