ಸಾಮಾನ್ಯವಾಗಿ ಸ್ಕಾರ್ಫ್ ಅನ್ನು ಉಣ್ಣೆಯಿಂದ ತಯಾರಿಸುತ್ತೇವೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ಒಂದರಲ್ಲಿ ಮಹಿಳೆಯೊಬ್ಬರು ಸ್ಕಾರ್ಫ್ ಅನ್ನು ನೂಡಲ್ಸ್ನಿಂದ ತಯಾರಿಸಿದ್ದಾರೆ. ಈ ಮೂಲಕ ಉಣ್ಣೆಯಿಂದಷ್ಟೇ ಅಲ್ಲ ನೂಡಲ್ಸ್ನಿಂದಲೂ ಸ್ಕಾರ್ಫ್ ತಯಾರಿಸಬಹುದೆಂದು ಈ ಮಹಿಳೆ ತೋರಿಸಿಕೊಟ್ಟಿದ್ದಾರೆ.
ಸಿಂಗಾಪುರ್ ನ ಸಿಂಥಿಯಾ ಸುವಿಟೊ ಎಂಬ ಮಹಿಳೆ ನೂಡಲ್ಸ್ನಿಂದ ಸ್ಕಾರ್ಫ್ ತಯಾರಿಸುವ ವಿಡಿಯೋವನ್ನು ಟಿಕ್ಟಾಕ್ ನಲ್ಲಿ ಹಂಚಿಕೊಂಡಿದ್ದಾರೆ. ಜನವರಿ 16 ರಂದು ಟ್ವಿಟರ್ನಲ್ಲಿ ಅಪ್ಲೋಡ್ ಆದ ಈ ವಿಡಿಯೋವನ್ನು 7 ಮಿಲಿಯನ್ ಜನರು ವೀಕ್ಷಣೆ ಮಾಡಿದ್ದು, 81,000 ರೀಟ್ವೀಟ್ಗಳನ್ನು ಪಡೆದಿದೆ.
ನೂಡಲ್ಸ್ನಲ್ಲಿ ಸ್ಕಾರ್ಫ್ ಹೆಣೆಯುವ ಕಲೆಯು 2014 ರಲ್ಲಿ ಪ್ರಾರಂಭವಾಗಿತ್ತು. ಆದರೆ ಇದೀಗ ಸಿಂಥಿಯಾ ಸುವಿಟೊ ಅವರ ಈ ವಿಡಿಯೋ ಮೂಲಕ ಈ ಕಲೆಯು ಪ್ರಸಿದ್ಧವಾಗಿದೆ.