ದಿನವೂ ಓಟ್ಸ್ ತಿನ್ನುವವರಿಗೆ ಒಂದೇ ರೀತಿಯ ರುಚಿಯಿಂದ ಬೇಸರವಾಗಿರುತ್ತದೆ. ಅಂತವರು ಓಟ್ಸ್ ನಿಂದ ಮಸಾಲಾ ಓಟ್ಸ್ ಅನ್ನು ಮಾಡಿ ನೋಡಿ.
ಮಸಾಲಾ ಓಟ್ಸ್ ಮಾಡಲು ಬೇಕಾಗುವ ಬೇಕಾಗುವ ಸಾಮಾಗ್ರಿಗಳು:
*ಎಣ್ಣೆ 2 ಚಮಚ
*ಜೀರಿಗೆ ಅರ್ಧ ಚಮಚ
*ಈರುಳ್ಳಿ ಅರ್ಧ ಕಪ್
*ಶುಂಠಿ ಬೆಳ್ಳುಳ್ಳಿ ಪೇಸ್ಟ್ 1 ಚಮಚ
*ಹಸಿಮೆಣಸಿನ ಕಾಯಿ 2
*ಹೆಚ್ಚಿದ ಟೊಮೇಟೊ 1
*ಕ್ಯಾರೆಟ್, ಬೀನ್ಸ್, ಬಟಾಣಿ ಹಾಗೂ ದೊಣ್ಣೆ ಮೆಣಸಿನ ಕಾಯಿ ಇವೆಲ್ಲ ಸೇರಿಸಿ ಒಂದು ಕಪ್
*ಮೆಣಸಿನ ಪುಡಿ ಅರ್ಧ ಚಮಚ
*ಅರಶಿನ ಪುಡಿ ಕಾಲು ಚಮಚ
*ಗರಂ ಮಸಾಲ ಅರ್ಧ ಚಮಚ
*ರುಚಿಗೆ ತಕ್ಕಷ್ಟು ಉಪ್ಪು
*1 ಕಪ್ ಓಟ್ಸ್
*ಕೊತ್ತಂಬರಿ ಸೊಪ್ಪು 2 ಚಮಚ
ಮಸಾಲಾ ಓಟ್ಸ್ ಮಾಡುವ ವಿಧಾನ:
ಮೊದಲಿಗೆ ಒಂದು ಪಾನ್ ಗೆ 2 ಚಮಚ ಎನ್ಣೆ ಹಾಕಿ ಅದು ಬಿಸಿ ಆದ ನಂತರ ಅದಕ್ಕೆ ಅರ್ಧ ಚಮಚ ಜೀರಿಗೆ ಹಾಕಿ ಅದು ಕೆಂಪಾದ ನಂತರ ಅದಕ್ಕೆ ಅರ್ಧ ಕಪ್ ಈರುಳ್ಳಿ ಹಾಕಿ ಅದು ಚಿನ್ನದ ಬಣ್ಣ ಆಗುವವರೆಗೆ ಹುರಿಯಿರಿ.
ನಂತರ ಪಾನ್ ಗೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ 1 ಚಮಚ, ಉದ್ದಕ್ಕೆ ಸೀಳಿದ ಹಸಿಮೆಣಸಿನ ಕಾಯಿ 3 ಹಾಕಿ ಹುರಿದ ನಂತರ ಹೆಚ್ಚಿದ ಟೊಮೇಟೊ 1 ಹಾಕಿ ಚೆನ್ನಾಗಿ ಹುರಿಯಿರಿ.
ನಂತರ ಇದಕ್ಕೆ ಕ್ಯಾರೆಟ್ ಬೀನ್ಸ್ ಬಟಾಣಿ ಹಾಗೂ ದೊಣ್ಣೆ ಮೆಣಸಿನ ಕಾಯಿ ಇವೆಲ್ಲ ಸೇರಿಸಿ ಒಂದು ಕಪ್ ಮೆಣಸಿನ ಪಡಿ ಅರ್ಧ ಚಮಚ, ಅರಶಿನ ಪುಡಿ ಕಾಲು ಚಮಚ, ಗರಂ ಮಸಾಲ ಅರ್ಧ ಚಮಚ ಹಾಗೂ ರುಚಿಗೆ ಇಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಹುರಿಯಿರಿ.
ನಂತರ ಇದಕ್ಕೆ 1 ಕಪ್ ಓಟ್ಸ್ ಹಾಕಿ ಚೆನ್ನಾಗಿ ಹುರಿದು ಇದಕ್ಕೆ 2 ಕಪ್ ನೀರು ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ನಂತರ ಪಾನ್ ಗೆ ಒಂದು ತಟ್ಟೆ ಮುಚ್ಚಿ 5 ನಿಮಿಷ ಬೇಯಲು ಬಿಡಿ. ನಂತರ ಮುಚ್ಚಿದ ತಟ್ಟೆ ತೆಗೆದು ಚೆನ್ನಾಗಿ ಕಲಸಿ ಇದರ ಮೇಲೆ ಕೊತ್ತಂಬರಿ ಸೊಪ್ಪು ಹಾಕಿದರೆ ಮಸಾಲಾ ಓಟ್ಸ್ ತಯಾರಾಗುತ್ತದೆ.