Sunday, June 8, 2025

ಸಂಸತ್ತಿನಲ್ಲಿ ಕಾಲೇಜು ಹುಡುಗನಂತಾದ ಶಶಿ ತರೂರ್; ಸುಪ್ರಿಯಾ ಸುಲೆ ಜೊತೆ ಮಾತಾಡುತ್ತ ಕುಳಿತ ಭಂಗಿ ವೈರಲ್

ನವದೆಹಲಿ: ಕಾಂಗ್ರೆಸ್​ ಸಂಸದ ಶಶಿ ತರೂರ್ ಒಂದಲ್ಲಾ ಒಂದು ವಿಷಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗುತ್ತಾ ಇರುತ್ತಾರೆ. ಇದೀಗ ಲೋಕಸಭೆಯಲ್ಲಿ ಶಶಿ ತರೂರ್ ಸುಪ್ರಿಯಾ ಸುಲೆ ಜೊತೆ ಮಾತನಾಡುತ್ತಾ ಕುಳಿತ ಭಂಗಿ ಕಾಲೇಜು ಹುಡುಗನನ್ನು ನೆನಪಿಸುತ್ತದೆ. ​

ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಸದನದ ವಿಡಿಯೋದಲ್ಲಿ ಫಾರೂಕ್ ಅಬ್ದುಲ್ಲಾ ಸದನವನ್ನು ಉದ್ದೇಶಿಸಿ ಎದ್ದು ನಿಂತು ಗಂಭೀರವಾಗಿ ಮಾತನಾಡುತ್ತಿದ್ದರೆ ಅವರ ಹಿಂದೆ ಕುಳಿತ ಶಶಿ ತರೂರ್ ಹಾಗೂ ಸಂಸದೆ ಸುಪ್ರಿಯಾ ಸುಲೆ ಜೊತೆ ಹರಟೆಹೊಡೆಯುತ್ತಿದ್ದಾರೆ. ಮುಂದಿನ ಸಾಲಿನಲ್ಲಿ ಕುಳಿತ ಸುಪ್ರಿಯಾ ಹಿಂತಿರುಗಿ ಶಶಿ ತರೂರ್ ಜೊತೆ ಮಾತನಾಡುತ್ತಿದ್ದರೆ, ಶಶಿ ತರೂರ್ ಮುಂದಿನ ಡೆಸ್ಕ್ ಮೇಲೆ ಕೈಯಿಟ್ಟು, ಕೈಗಳ ಮೇಲೆ ಗಲ್ಲ ಇಟ್ಟು ನಗುತ್ತಾ ಅವರ ಮಾತುಗಳನ್ನು ಆಲಿಸುತ್ತಿರುತ್ತಾರೆ.

ಶಶಿ ತರೂರ್ ಅವರ ಈ ಭಂಗಿಯು ಕಾಲೇಜು ಹುಡುಗನನ್ನು ನೆನಪಿಸುತ್ತಿದ್ದು, ಫಾರೂಕ್ ಅವರು ಯಾವ ವಿಷಯ ಮಾತನಾಡುತ್ತಿದ್ದಾರೆಂಬ ಅರಿವು ಇದೆಯೋ ಇಲ್ಲವೋ ಎಂಬುದು ತಿಳಿಯುತ್ತಿಲ್ಲ. ಸದ್ಯ ಟ್ವಿಟರ್ ಅಕೌಂಟ್‌ನಲ್ಲಿ ಶೇರ್ ಆಗಿರುವ ಸದನದ ಈ ವಿಡಿಯೋ ಸಖತ್ ವೈರಲ್ ಆಗುತ್ತಿದ್ದು, ಶಶಿ ತರೂರ್‌ರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗುತ್ತಿದೆ.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles