ಪುಷ್ಪ ಸಿನಿಮಾದ ಶ್ರೀವಲ್ಲಿ ಸಾಂಗ್ ತುಂಬಾನೇ ಸದ್ದು ಮಾಡಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಈ ಸಾಂಗ್ ವೈರಲ್ ಆಗಿದ್ದು, ವಿದೇಶಿಗರು ಕೂಡ ಈ ಹಾಡಿಗೆ ಫಿದಾ ಆಗಿದ್ದರು. ಆದರೆ ಶ್ರೀವಲ್ಲಿ ಸಾಂಗ್ ಈಗ ಬೆಂಗಾಳಿ ಆವೃತ್ತಿಯಲ್ಲಿ ಬರಲಿದೆ. ಖ್ಯಾತ ಗಾಯಕಿ ಉಶಾ ಉತ್ತಪ್ ಈ ಹಾಡಿಗೆ ಧ್ವನಿ ನೀಡಿದ್ದು, ಸದ್ಯ ಯ್ಯೂಟ್ಯೂಬ್ನಲ್ಲಿ ಉಶಾ ಅವರ ಬೆಂಗಾಳಿ ಶ್ರೀವಲ್ಲಿ ಸಾಂಗ್ ವಿಡಿಯೋ ತುಂಬಾ ವೈರಲ್ ಆಗಿದೆ.
ಬೆಂಗಾಳಿ ಶ್ರೀವಲ್ಲಿ ಸಾಂಗ್ಗೆ ರಾಜೀವ್ ದತ್ತಾ ಹಾಡಿನ ಸಾಲುಗಳನ್ನು ಬರೆದಿದ್ದಾರೆ. ಉಶಾ ಅವರು ಹಸ್ಕಿ ಧ್ವನಿಯಲ್ಲಿ ಈ ಹಾಡು ಹಾಡಿದ್ದು ಅಭಿಮಾನಿಗಳು ಉಶಾ ಉತ್ತಪ್ ಕಂಠಕ್ಕೆ ಮನಸ್ಸೋತಿದ್ದಾರೆ. ಈ ವಿಡೀಯೊ ಫೆಬ್ರವರಿ 28ರಂದು ಯ್ಯೂಟ್ಯೂಬ್ನಲ್ಲಿ ಹಂಚಿಕೊಳ್ಳಲಾಗಿದ್ದು, 3 ಲಕ್ಷಕ್ಕೂ ಅಧಿಕ ಮಂದಿ ವಿಡಿಯೋವನ್ನು ವೀಕ್ಷಿಸಿದ್ದಾರೆ. ತೆಲುಗುನ ಈ ಹಾಡನ್ನು ಚಂದ್ರಭೋಸ್ ಬರೆದಿದ್ದು, ದೇವಿ ಶ್ರೀ ಪ್ರಸಾದ್ ಕಂಪೋಸ್ ಮಾಡಿದ್ದರು. ಆದರೆ ಇದೀಗ ಬೆಂಗಾಳಿ ಆವೃತ್ತಿಯಲ್ಲಿ ಮತ್ತೆ ಶ್ರೀವಲ್ಲಿ ಹಾಡು ಸದ್ದು ಮಾಡಲಿದೆ.