ಪಿತ್ರೋಡಿ: ಯಂಗ್ ಸ್ಟಾರ್ ಸ್ಪೋರ್ಟ್ಸ್ & ಕಲ್ಚರಲ್ ಪಿತ್ರೋಡಿ ಇದರ ಆಶ್ರಯದಲ್ಲಿ ದ್ವಿತೀಯ ಬಾರಿಗೆ ನಡೆದ ಆಹ್ವಾನಿತ ಗ್ರಾಮೀಣ ಮತ್ತು ಪಿನ್ ಕೋಡ್ ಮಾದರಿಯ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ಶ್ರೀ ರಾಮ್ ಟ್ರೋಫಿ 2022 ಸಮಾಪನಗೊಂಡಿದೆ.
ಪಂದ್ಯಾಟದಲ್ಲಿ ಪಿನ್ ಕೋಡ್ ವಿಭಾಗದಲ್ಲಿ ಪಳ್ಳಿ ಫ್ರೆಂಡ್ಸ್ ಪಳ್ಳಿ ಮೊದಲನೆ ಸ್ಥಾನ ಪಡೆದಿದೆ. ಸಂಡೆ ಫ್ರೆಂಡ್ಸ್ ದ್ವಿತೀಯ ಸ್ಥಾನ, ಹಾವಂಜೆ ಫ್ರೆಂಡ್ಸ್ ತೃತೀಯ ಸ್ಥಾನ ಪಡೆದುಕೊಂಡಿದೆ. ಗ್ರಾಮೀಣ ಮಾದರಿಯ ಪಂದ್ಯಾಟದಲ್ಲಿ ಯಂಗ್ ಸ್ಟಾರ್ ತಂಡ ಪ್ರಥಮ ಸ್ಥಾನ, ಎಸ್.ಎಲ್. ಎನ್ ಗುಜ್ಜರಬೆಟ್ಟು ತಂಡ ದ್ವಿತೀಯ ಸ್ಥಾನ ಪಡೆದಿದೆ.
ಈ ಸಂಧರ್ಭ ಸಾಧಕ ಗಂಗಾಧರ್ ಜಿ ಪಡುಕರೆ ಮತ್ತು ಈಶ್ವರ್ ಮಲ್ಪೆ ಇವರನ್ನು ಸನ್ಮಾನಿಸಲಾಯಿತು.
ಪಂದ್ಯಾಟದಲ್ಲಿ ಬಿ.ಜೆ.ಪಿ ರಾಷ್ಟ್ರೀಯ ಹಿಂದುಳಿದ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಯಶ್ ಪಾಲ್ ಸುವರ್ಣ, ಗ್ರಾ.ಪಂ. ಸದಸ್ಯ ಜಿತೇಂದ್ರ ಶೆಟ್ಟಿ, ಬಿ.ಜೆ.ಪಿ ಯುವ ಮೋರ್ಚಾ ಅಧ್ಯಕ್ಷ ಸಚಿನ್ ಸುವರ್ಣ, ಪ್ರಜ್ವಲ್ ಕಾಂಚನ್, ಶೈಲೇಶ್ ಪಿತ್ರೋಡಿ, ಶಿವಪ್ರಸಾದ್ ಪಟ್ನ, ರಾಹುಲ್ ಶೆಟ್ಟಿ, ಭರತ್ ಪಿತ್ರೋಡಿ, ತೇಜ ಕೋಟ್ಯಾನ್, ಮಹೇಶ್ ಯು, ಯಂಗ್ ಸ್ಟಾರ್ ಅಧ್ಯಕ್ಷ ರಕ್ಷಿತ್, ಪ್ರಧಾನ ಕಾರ್ಯದರ್ಶಿ ಮದನ್ ಉಪಸ್ಥಿತರಿದ್ದರು.
ಪ್ರಜ್ವಲ್.ಜಿ. ಅಮಿನ್ ಕಾರ್ಯಕ್ರಮ ನಿರೂಪಿಸಿದರು.