Sunday, June 8, 2025

ಇನ್ಮುಂದೆ ಫ್ಲಿಪ್​​ಕಾರ್ಟ್​​ನಲ್ಲಿ ಸ್ಮಾರ್ಟ್​ಫೋನ್ ಖರೀದಿ ಅಷ್ಟೆ ಅಲ್ಲ ಮಾರಾಟ ಕೂಡ ಮಾಡಬಹುದು

ಇನ್ನು ಮುಂದೆ ಫ್ಲಿಪ್​​ಕಾರ್ಟ್​​ನಲ್ಲಿ ಕೇವಲ ಸ್ಮಾರ್ಟ್​ಫೋನ್​ ಅನ್ನು ಖರೀದಿ ಅಷ್ಟೆ ಅಲ್ಲ ಮಾರಾಟ ಕೂಡ ಮಾಡಬಹುದಾಗಿದೆ. ಎಲೆಕ್ಟ್ರಾನಿಕ್​ ರೀ ಕಾಮರ್ಸ್​ ಯಂತ್ರ ಎನ್ನುವ ಸಂಸ್ಥೆಯನ್ನು ಫ್ಲಿಪ್​ ಕಾರ್ಟ್​​ ಸದ್ಯದಲ್ಲೇ ಸ್ವಾಧೀನಪಡಿಸಿಕೊಳ್ಳಲಿದೆ. ಅದರಲ್ಲಿ ಫ್ಲಿಪ್​​ಕಾರ್ಟ್ ಭಾರತದ ಪ್ರಮುಖ ನಗರಗಳಲ್ಲಿ 1500ಕ್ಕೂ ಹೆಚ್ಚು ಪಿನ್​ಕೋಡ್​ಗಳಲ್ಲಿ ಹಳೆಯ ಪೋನ್​ಗಳನ್ನು ಬಳಕೆದಾರರು ಮಾರಾಟ ಮಾಡಲು ಲಭ್ಯವಿದೆ ಎಂದು ತಿಳಿಸಿದೆ.

ಸದ್ಯ ಎಲ್ಲಾ ರೀತಿಯ ಸ್ಮಾರ್ಟ್​ಫೋನ್ ಗಳನ್ನು ಮಾತ್ರ ಮಾರಾಟ ಮಾಡಲು ಅವಕಾಶ ನೀಡಿದ್ದು, ಮುಂದಿನ ದಿನಗಳಲ್ಲಿ ಇತರ ವಸ್ತುಗಳನ್ನು ಮಾರಾಟ ಮಾಡಲು ಅವಕಾಶ ನೀಡಲಿದ್ದೇವೆ. ಮಾರಾಟ ಮಾಡುವ ಸ್ಮಾರ್ಟ್​ಫೋನ್ ಗಳು ಫ್ಲಿಪ್​​ಕಾರ್ಟ್ ಅಥವಾ ಹೊರಗಡೆ ಖರೀದಿ ಮಾಡಿದ್ದರೂ ಮಾರಾಟ ಮಾಡಬಹುದಾಗಿದೆ. ಫ್ಲಿಪ್​ ಕಾರ್ಟ್​ ಆ್ಯಪ್​ನ ಕೆಳಗಿನ ಬಾರ್​ನಲ್ಲಿ ಮಾರಾಟ ಮಾಡುವ ಆಯ್ಕೆ ಇರಲಿದೆ ಎಂದು ಫ್ಲಿಪ್​​ ಕಾರ್ಟ್​ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ಸ್ಮಾರ್ಟ್​ಫೋನ್ ಮಾರಾಟ ಮಾಡುವ ಬಳಕೆದಾರರು ಇ ವೋಚರ್​ ಪಡೆಯುತ್ತಾರೆ. ಮಾರಾಟ ಮಾಡುವ ವೇಳೆ ಮಾರಾಟಗಾರರ ಬೆಲೆಯನ್ನು ತಿಳಿಯಲು ಕೆಲವು ಪ್ರಶ್ನೆಗಳನ್ನು ಕೇಳಿ ಅದರ ಉತ್ತರ ಪಡೆದ ನಂತರ 48 ಗಂಟೆಯೊಳಗೆ ಸ್ಮಾರ್ಟ್​ಫೋನ್ ಪಡೆದುಕೊಳ್ಳುತ್ತದೆ. ತದನಂತರ ಅದನ್ನು ಪರಿಶೀಲನೆ ನಡೆಸಿ ಫ್ಲಿಪ್​​ಕಾರ್ಟ್​​ ಮಾರಾಟ ಮಾಡಲಿದೆ ಎಂದು ತಿಳಿಸಿದೆ.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles