ಭೋಪಾಲ್: ತಂದೆ ತನ್ನ ಮೊಬೈಲ್‌ನ ಡೇಟಾ ಪ್ಯಾಕ್ ರೀಚಾರ್ಜ್ ಮಾಡಿಲ್ಲವೆಂದು 14 ವರ್ಷದ ಬಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಧ್ಯಪ್ರದೇಶದ ಜಬಲ್‌ಪುರ್ ಜಿಲ್ಲೆಯಲ್ಲಿ ಸೋಮವಾರ ನಡೆದಿದೆ.
ಬಾಲಕನ ತಂದೆಯು ಕೂಲಿ ಕಾರ್ಮಿಕನಾಗಿದ್ದು, ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದರು. ಬಾಲಕನು ಆನ್ಲೈನ್ ಗೇಮ್ ವ್ಯಸನಿಯಾಗಿದ್ದು, ಮೊಬೈಲ್‌ಗೆ ಡೇಟಾ ಪ್ಯಾಕ್ ರೀಚಾರ್ಜ್ ಮಾಡುವಂತೆ ತಂದೆಯನ್ನು ಪೀಡಿಸುತ್ತಿದ್ದ. ಮಗನ ಬೇಡಿಕೆಯನ್ನು ತಂದೆ ನಿರಾಕರಿಸಿದ್ದರಿಂದ ಮನೆಯಲ್ಲಿರುವ ಸೀಲಿಂಗ್ ಫ್ಯಾನ್‌ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.


