ಬೆಂಗಳೂರು: ಎಸ್ಎಸ್ಎಲ್‌ಸಿ ಪೂರ್ವಸಿದ್ಧತಾ ಪರೀಕ್ಷೆ ವೇಳಾಪಟ್ಟಿಯನ್ನು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ಪ್ರಕಟಿಸಿದೆ. ಫೆಬ್ರವರಿ 21 ರಂದು ಆರಂಭವಾಗುವ ಪರೀಕ್ಷೆಗಳು ಫೆಬ್ರವರಿ 26ಕ್ಕೆ ಮುಗಿಯಲಿದೆ.
ಫೆಬ್ರವರಿ 21ಕ್ಕೆ ಪ್ರಥಮ ಭಾಷೆ ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು ಇಂಗ್ಲಿಷ್, ಸಂಸ್ಕೃತ ಫೆಬ್ರವರಿ 22 ಕ್ಕೆ ಕೋರ್ ಸಬ್ಜೆಕ್ಟ್ ಸಮಾಜಶಾಸ್ತ್ರ, ಫೆಬ್ರವರಿ 23 ದ್ವೀತಿಯ ಭಾಷೆ ಕನ್ನಡ, ಇಂಗ್ಲಿಷ್, ಫೆಬ್ರವರಿ 24 ಕೋರ್ ಸಬ್ಜೆಕ್ಟ್ ಗಣಿತ, ಫೆಬ್ರವರಿ 25 ತೃತೀಯ ಭಾಷೆ ಹಿಂದಿ, ಕನ್ನಡ, ಇಂಗ್ಲಿಷ್. ಅರೇಬಿಕ್, ಪರ್ಷಿಯನ್, ಉರ್ದು ಸಂಸ್ಕೃತ, ಕೊಂಕಣಿ, ತುಳು, ಫೆಬ್ರವರಿ 26ರಂದು ಕೋರ್ ಸಬ್ಜೆಕ್ಟ್ ವಿಜ್ಞಾನ ಪರೀಕ್ಷೆಗಳು ನಡೆಯಲಿದೆ.
ಈಗಾಗಲೇ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಎಸ್ಎಸ್ಎಲ್‌ಸಿ ಮುಖ್ಯ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟ ಮಾಡಿದೆ. ಇದರ ಅನುಸಾರ ಮಾರ್ಚ್ 28 ರಿಂದ ಏಪ್ರಿಲ್ 11ರವರೆಗೆ ಪರೀಕ್ಷೆಗಳು ನಡೆಯಲಿದೆ.