Saturday, June 7, 2025

ಹಾಲಿನೊಂದಿಗೆ ಈ ಆಹಾರಗಳನ್ನು ಸೇವಿಸುತ್ತಿದ್ದರೆ ಇಂದೇ ನಿಲ್ಲಿಸಿ

ಹಾಲಿನಲ್ಲಿ ಪೋಷಕಾಂಶಗಳು ಮತ್ತು ಕ್ಯಾಲ್ಸಿಯಂ ಅತ್ಯಂತ ಹೇರಳವಾಗಿದೆ. ವೈದ್ಯರ ಪ್ರಕಾರ ಮಕ್ಕಳು ಮಾತ್ರವಲ್ಲದೇ ದೊಡ್ಡವರೂ ಪ್ರತಿನಿತ್ಯ ಹಾಲು ಕುಡಿಯುವುದು ಒಳ್ಳೆಯದು. ಆದರೆ ಕೆಲವರು ಹಾಲಿನ ಜೊತೆಯಲ್ಲಿ ಕೆಲವು ಆಹಾರಗಳನ್ನು ಸೇವನೆ ಮಾಡುತ್ತಾರೆ. ಇದು ದೇಹದ ಆರೋಗ್ಯಕ್ಕೆ ಒಳ್ಳೆಯದಲ್ಲ ಇದರಿಂದ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಈ ಕೆಳಗಿನ ಆಹಾರಗಳನ್ನು ಎಂದಿಗೂ ಹಾಲಿನೊಂದಿಗೆ ಸೇವನೆ ಮಾಡಬೇಡಿ.

ಬೆಳಗಿನ ಉಪಹಾರದ ನಂತರ ಹಾಗೂ ರಾತ್ರಿ ಊಟವಾದ ತಕ್ಷಣ ಹಾಲು ಕುಡಿಯಬಾರದು. ಈ ಆಹಾರಗಳಲ್ಲಿ ಉಪ್ಪಿನ ಅಂಶವಿದ್ದು ಇದು ದೇಹದಲ್ಲಿ ಹಾಲಿನೊಂದಿಗೆ ಮಿಶ್ರಣವಾದರೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದರಿಂದ ಚರ್ಮದ ಸಮಸ್ಯೆಗಳು ಉಂಟಾಗುತ್ತವೆ. ಆದ್ದರಿಂದ ಊಟವಾದ ಕೆಲ ಸಮಯದ ನಂತರ ಹಾಲನ್ನು ಕುಡಿಯುವುದು ಉತ್ತಮ.

ಮೂಲಂಗಿಯನ್ನು ಸೇವಿಸಿದ ನಂತರ ಹಾಲನ್ನು ಕುಡಿಯಬಾರದು. ಇದನ್ನು ಸೇವಿಸಿದ 2 ಗಂಟೆಗಳ ಬಳಿಕ ಹಾಲನ್ನು ಕುಡಿಯುವುದು ಉತ್ತಮ. ಇಲ್ಲವಾದಲ್ಲಿ ಚರ್ಮ ರೋಗಗಳ ಅಪಾಯ ಹೆಚ್ಚಾಗುತ್ತದೆ.

ಹಾಲನ್ನು ಹುಳಿ ಹಣ್ಣುಗಳಾದ ಕಿತ್ತಳೆ, ನಿಂಬೆ, ದ್ರಾಕ್ಷಿ, ಹುಣಸೆಹಣ್ಣು, ನೆಲ್ಲಿಕಾಯಿ ಮತ್ತು ಸೇಬುಗಳನ್ನು ಸೇವಿಸಿದ ನಂತರ ಕುಡಿಯಬಾರದು. ಒಂದು ವೇಳೆ ಕುಡಿದರೆ ಹಾಲು ವಿಷಕಾರಿಯಾಗುತ್ತದೆ. ಹಾಗೂ ಹಾಲನ್ನು ಬಾಳೆಹಣ್ಣಿನ ಜೊತೆಗೆ ಕುಡಿಯಬಾರದು. ಇದರಿಂದ ಕಫದಂತಹ ಸಮಸ್ಯೆ ಉಂಟಾಗುತ್ತದೆ. ಹೀಗೆ ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹಾಗೂ ಹಾಲಿನೊಂದಿಗೆ ಚೆರ್ರಿ, ಯೀಸ್ಟ್ ನಿಂದ ತಯಾರಿಸಿದ ಆಹಾರಗಳು, ಮೊಟ್ಟೆ, ಮಾಂಸ, ಮೀನು, ಕೆಚಪ್, ಮೊಸರು ಮತ್ತು ಬೀನ್ಸ್ ಅನ್ನು ಸೇವಿಸಬಾರದು.

ಬೇಳೆಕಾಳುಗಳನ್ನು ಹಾಲಿನೊಂದಿಗೆ ಸೇವಿಸಬಾರದು. ಆರೋಗ್ಯ ಖಾಳಜಿಯಿಂದ ಮೊಳಕೆಗಟ್ಟಿದ ಕಾಳುಗಳನ್ನು ಹಲವರು ತಿನ್ನುತ್ತಾರೆ. ಆದರೆ ಇದಾದ ಬಳಿಕ ಹಾಲನ್ನು ಕುಡಿಯುತ್ತಾರೆ. ಹೀಗೆ ತಿನ್ನುವುದರಿಂದ ಹೃದಯಾಘಾತವಾಗುವ ಸಂಭವವಿದೆ. ಆದ್ದರಿಂದ ಬೇಳೆಕಾಳುಗಳೊಂದಿಗೆ ಹಾಲನ್ನು ಕುಡಿಯಬಾರದು. ಹಾಲಿನೊಂದಿಗೆ ಕೇವಲ ಜೇನುತುಪ್ಪ, ಬೆಲ್ಲ ಮತ್ತು ಸಕ್ಕರೆಯನ್ನು ಮಾತ್ರ ಬೆರೆಸಿ ಸೇವಿಸಬಹುದಾಗಿದೆ.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles