ಮಡಿಕೇರಿ: ಕೊಟ್ಟಮುಡಿ ಸಮೀಪ ಗೆಳೆಯರೊಂದಿಗೆ ಫಾಲ್ಸ್ಗೆ ತೆರಳಿದ್ದ ವಿದ್ಯಾರ್ಥಿಯೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಶನಿವಾರ ಸಂಜೆ ಸಂಭವಿಸಿದೆ.
ಮೃತ ಯುವಕನನ್ನು 16 ವರ್ಷ ಪ್ರಾಯದ ಕೊಟ್ಟಮುಡಿ ನಿವಾಸಿ ಹಾರಿಸ್ ಹಾಗೂ ಫೌಜಿಯ ದಂಪತಿಗಳ ಪುತ್ರ ಅಪ್ಜಲ್ ಎಂದು ಗುರುತಿಸಲಾಗಿದೆ.
ಫಾಲ್ಸ್ ನಲ್ಲಿ ಆಟವಾಡುತ್ತಿದ್ದ ಸಂದರ್ಭ ಕಾಲು ಜಾರಿ ಬಿದ್ದು ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.