ಸುಳ್ಯ: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆ ಕುಸಿದು ಬಿದ್ದು ಹೃದಯಾಘಾತದಿಂದ ಮೃತಪಟ್ಟ ಘಟನೆ ಸುಳ್ಯದ ಜಟ್ಟಿಪಳ್ಳ ಅಂಗನವಾಡಿ ಬಳಿ ರಸ್ತೆಯಲ್ಲಿ ಶುಕ್ರವಾರ ನಡೆದಿದೆ.
ಸುಳ್ಯ ಜಟ್ಟಿಪಳ್ಳ ಕಟ್ಟೆ ಬಳಿ ನಿವಾಸಿ ಪದ್ಮಾವತಿ (55) ಮೃತ ಮಹಿಳೆ. ಮನೆಯಿಂದ ಸುಳ್ಯಕ್ಕೆ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ರಸ್ತೆಯಲ್ಲೇ ಹೃದಯಾಘಾತವಾಗಿದೆ. ಮಹಿಳೆಯನ್ನು ಸ್ಥಳೀಯರು ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಅಷ್ಟರಲ್ಲೇ ಮಹಿಳೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.