ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಸುರೇಶ್ ರೈನಾ ಬಿಕರಿಯಾಗದೆ ಅಭಿಮಾನಿಗಳಿಗೆ ನಿರಾಸೆ ಉಂಟಾಗಿತ್ತು. ಆದರೆ ಇದೀಗ ರೈನಾ ಅಭಿಮಾನಿಗಳಿಗೆ ಕೊಂಚ ಸಂತಸದ ಸುದ್ದಿಯೊಂದು ಸಿಕ್ಕಿದೆ.
ಅದೇನೆಂದರೆ ಗುಜರಾತ್ ಟೈಟಾನ್ಸ್ ಪರ ಆಡಬೇಕಿದ್ದ ಜಾಸನ್ ರಾಯ್ ಈ ವರ್ಷದ ಐಪಿಎಲ್ ನಿಂದ ಹೊರ ಉಳಿಯಲಿದ್ದಾರೆ, ಹೀಗಾಗಿ ಗುಜರಾತ್ ಪರ ಓರ್ವ ಪ್ರಭಾವಿ ಆಟಗಾರನ ಉಪಸ್ಥಿತಿಯ ಕೊರತೆ ಉಂಟಾಗಲಿದೆ. ಈ ಕಾರಣಕ್ಕಾಗಿ ರೈನಾ ಅಭಿಮಾನಿಗಳು ಜಾಸನ್ ರಾಯ್ ಸ್ಥಾನಕ್ಕೆ ರೈನಾ ಆಯ್ಕೆಗೊಳ್ಳಬಹುದು ಎನ್ನುವ ಕಾತುರದಲ್ಲಿದ್ದಾರೆ.
ಜಾಸನ್ ರಾಯ್ ರವರು ತಮ್ಮ ಕುಟುಂಬದೊಂದಿಗೆ ಕಾಲ ಕಳೆಯುವ ಸಲುವಾಗಿ ಈ ಬಾರಿಯ ಐಪಿಎಲ್ ನಲ್ಲಿ ಕಾಣಿಸುತ್ತಿಲ್ಲ. ಒಟ್ಟಾರೆ ಜಾಸನ್ ರಾಯ್ ಅಲಭ್ಯತೆ ರೈನಾ ಎಂಟ್ರಿಗೆ ದಾರಿಯಾಗಬಹುದು ಎನ್ನುವ ನಿರೀಕ್ಷೆ ರೈನಾ ಅಭಿಮಾನಿಗಳದ್ದಾಗಿದೆ.