ದೆಹಲಿ: ಡಿಸಿಜಿಐ (ಡ್ರಗ್ ಕಂಟ್ರೋಲರ್ ಜೆನೆರಲ್ ಆಫ್ ಇಂಡಿಯಾ) ವು ರಾಷ್ಯಾದ ಕೊರೋನಾ ನಿರೋಧಕ ಸಿಂಗಲ್ ಡೋಸ್ ಲಸಿಕೆ ಸ್ಪುಟ್ನಿಕ್ ಲೈಟ್ ನ ತುರ್ತು ಬಳಕೆಗೆ ಅನುಮತಿ ನೀಡಿದೆ.
ಸುಟ್ನಿಕ್ ಲೈಟ್ ಭಾರತದಲ್ಲಿ ಬಳಕೆಗೆ ಅನುಮತಿ ಪಡೆದ 9 ನೇ ಲಸಿಕೆಯಾಗಿದ್ದು, ಇದಕ್ಕೆ ಅನುಮತಿ ದೊರೆತಿರುವುದು ಕೊರೋನಾ ಪಿಡುಗಿನ ವಿರುದ್ಧ ಹೋರಾಡಲು ಹೊಸ ಬಲ ನೀಡಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಮನ್ಸುಖ್ ಮಾಂಡವಿಯ ತಿಳಿಸಿದ್ದಾರೆ.
ಸುಟ್ನಿಕ್ ಲೈಟ್ ಲಸಿಕೆಯನ್ನು ಬೂಸ್ಟರ್ ಡೋಸ್ ಆಗಿ ನೀಡಲು ಅನುಮತಿ ನೀಡಬೇಕೆಂದು ಡಿಸಿಜಿಐ ಗೆ ಭಾರತದ ಪ್ರಮುಖ ಔಷಧ ತಯಾರಿಕಾ ಸಂಸ್ಥೆ ಡಾಕ್ಟರ್ ರೆಡ್ಡೀಸ್ ಲ್ಯಾಬೊರೇಟರೀಸ್ ಪ್ರಸ್ತಾವನೆ ಸಲ್ಲಿಸಿತ್ತು. ಇದೀಗ ಡಾಕ್ಟರ್ ರೆಡ್ಡೀಸ್ ಕಂಪನಿಯು ರಷ್ಯಾದ ಸ್ಪುಟ್ನಿಕ್ ಜೊತೆಗೆ ಲಸಿಕೆ ಉತ್ಪಾದನೆಗಾಗಿ ಒಡಂಬಡಿಕೆ ಮಾಡಿಕೊಂಡಿದೆ.