Sunday, June 8, 2025

ಟಾಟಾ ಗ್ರೂಪ್ ಗೆ ಏರ್ ಇಂಡಿಯಾ ಮರಳಿ ಹಸ್ತಾಂತರ

ನವದೆಹಲಿ: ಟಾಟಾ ಗ್ರೂಪ್ ಗೆ ಏರ್ ಇಂಡಿಯಾ ವೈಮಾನಿಕ ಸಂಸ್ಥೆಯನ್ನು ಹಸ್ತಾಂತರಿಸುವ ಕುರಿತು ಸರ್ಕಾರ ಅಧಿಸೂಚನೆ ಪ್ರಕಟಿಸಿದೆ. ಭಾರತ ಸರ್ಕಾರವು ನಾನ್ ಕೋರ್ ಅಸೆಟ್ಸ್ ನ ವರ್ಗಾವಣೆಗಾಗಿ ಏರ್ ಇಂಡಿಯಾ ಹಾಗೂ ವಿಶೇಷ ಉದ್ದೇಶದ ವಾಹನ AIAHL ನಡುವಿನ ಒಪ್ಪಂದಕ್ಕೆ ಅಧಿಸೂಚನೆ ಹೊರಡಿಸಿದೆ.

ಕಳೆದ ಅಕ್ಟೋಬರ್ ನಲ್ಲಿ ಸರ್ಕಾರವು ಟಾಟಾ ಗ್ರೂಪ್ ನೊಂದಿಗೆ 18,000 ಕೋಟಿ ರೂಪಾಯಿಗಳಿಗೆ ಷೇರು ಮಾರಾಟ ಒಪ್ಪಂದಕ್ಕೆ ಸರ್ಕಾರ ಮುಂದಾಗಿತ್ತು. 1932 ರಲ್ಲಿ ಟಾಟಾ ಗ್ರೂಪ್ ವೈಮಾನಿಕ ಸಂಸ್ಥೆಯನ್ನು ಸ್ಥಾಪನೆ ಮಾಡಿತ್ತು. ಇದೀಗ ಟಾಟಾ ಗ್ರೂಪ್ ವೈಮಾನಿಕ ಸಂಸ್ಥೆಯನ್ನು ಮರಳಿ ಸರ್ಕಾರದಿಂದ ಪಡೆಯುತ್ತಿದೆ. ವೈಮಾನಿಕ ಸಂಸ್ಥೆಯ ಹಸ್ತಾಂತರ ಪ್ರಕ್ರಿಯೆ ಪೂರ್ಣವಾದ ಬಳಿಕ ಒಪ್ಪಂದಂತೆ ಟಾಟಾ ಸಂಸ್ಥೆಯು ಸರ್ಕಾರಕ್ಕೆ 2,700 ಕೋಟಿ ರೂಪಾಯಿ ನಗದು ಪಾವತಿ ಮಾಡಲಿದೆ. ಹಾಗೂ ಏರ್ ಇಂಡಿಯಾ ಸಂಸ್ಥೆಯ 15,300 ಕೋಟಿ ರೂಪಾಯಿ ಸಾಲದ ಹೊರೆಯನ್ನು ಟಾಟಾ ಗ್ರೂಪ್ ಹೊರಲಿದೆ.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles