Saturday, June 7, 2025

ಭಾರತ-ಪಾಕ್ ಗಡಿಯಲ್ಲಿ ಡ್ರೋನ್ ಮೂಲಕ ಸ್ಫೋಟಕ ಎಸೆದ ಭಯೋತ್ಪಾದಕರು

ಅಮೃತಸರ: ಪಂಜಾಬ್‌ನ ಅಮೃತಸರದ ಪಂಜ್‌ಗ್ರಾಹಿಯನ್ ಗಡಿಯ ಹೊರ ಭಾಗದಲ್ಲಿ ಡ್ರೋನ್ ಮುಖಾಂತರ ಸ್ಫೋಟಕಗಳನ್ನು ಎಸೆಯಲಾಗಿದ್ದು, ಭಯೋತ್ಪಾದಕರ ಸ್ಫೋಟ ಪ್ರಯತ್ನವನ್ನು ಭಾರತೀಯ ಗಡಿ ಭದ್ರತಾ ಪಡೆಯ ಯೋಧರು ವಿಫಲಗೊಳಿಸಿದ್ದಾರೆ.

ಮಂಗಳವಾರ ರಾತ್ರಿ 1 ಗಂಟೆ ಸುಮಾರಿಗೆ ಪಾಕಿಸ್ತಾನದ ಕಡೆಯಿಂದ ಭಾರತದ ಕಡೆ ಬರುತ್ತಿರುವ ಡ್ರೋನ್ ಶಬ್ದ ಕೇಳಿ ಬಿಎಸ್‌ಎಫ್ ಸಿಬ್ಬಂದಿ ಡ್ರೋನ್ ಗೆ ಗುಂಡುಹಾರಿಸಿದ್ದಾರೆ. ಆ ಬಳಿಕ ಡ್ರೋನ್ ಪಾಕಿಸ್ತಾನದ ಕಡೆಗೆ ಹಾರುತ್ತದೆ. ನಂತರ ಶೋಧ ಕಾರ್ಯಾ ಪ್ರಾರಂಭಿಸಿದ ಬಿಎಸ್‌ಎಫ್ ಯೋಧರು ಎರಡು ಸ್ಥಳದಲ್ಲಿ ಸ್ಫೋಟಕಗಳು ಹಾಗೂ ಪಿಸ್ತೂಲನ್ನು ಪತ್ತೆ ಮಾಡಿದ್ದಾರೆ. ಡ್ರೋನ್ ನಿಂದಲೇ ಸ್ಫೋಟಕಗಳಿರುವ ಪ್ಯಾಕೆಟ್ ಗಳನ್ನು ಎಸೆದಿರುವ ಶಂಕೆ ಇದೆ. ಈ ಪ್ಯಾಕೆಟ್ ಗಡಿಯಿಂದ 2.7 ಕೀ.ಮಿ ದೂರದಲ್ಲಿ ದೊರೆತಿರುವುದಾಗಿ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles