ಗಾಂಧಿನಗರ: ಅಹಮದಾಬಾದ್ ನಲ್ಲಿ 2008 ರಲ್ಲಿ ಸಂಭವಿಸಿದ್ದ ಸರಣಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ 77 ಮಂದಿಯನ್ನು ಬಂಧಿಸಲಾಗಿತ್ತು. ಇದೀಗ ಗುಜರಾತ್ ನ ವಿಶೇಷ ನ್ಯಾಯಾಲಯವು 77 ಮಂದಿಯಲ್ಲಿ 28 ಮಂದಿಯನ್ನು ವಜಾಗೊಳಿಸಿದ್ದು, ಉಳಿದ 49 ಆರೋಪಿಗಳನ್ನು ದೋಷಿಗಳೆಂದು ಎಂದು ತೀರ್ಪು ನೀಡಿದೆ.
2008 ರಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ 56 ಮಂದಿ ಸಾವನ್ನಪ್ಪಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 20 ಎಫ್‌ಐಆರ್ ಕೂಡ ದಾಖಲಾಗಿತ್ತು. 2002 ರ ಗಲಭೆಗೆ ಪ್ರತಿಯಾಗಿ 2008 ರಲ್ಲಿ ಅಹಮದಾಬಾದ್ ನಲ್ಲಿ ಸರಣಿ ಬಾಂಬ್ ಸ್ಫೋಟಿಸಲಾಗಿದೆ ಎಂದು ಇಂಡಿಯನ್ ಮುಜಾಹಿದೀನ್ ಉಗ್ರಗಾಮಿ ಸಂಘಟನೆ ತಿಳಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ 1,100 ಕ್ಕೂ ಹೆಚ್ಚು ಸಾಕ್ಷಿಗಳನ್ನು ವಿಚಾರಣೆ ನಡೆಸಿದ್ದು, ಇವರಲ್ಲಿ 26 ಸಾಕ್ಷಿಗಳನ್ನು ಪ್ರಮುಖ ಸಾಕ್ಷ್ಯಾದಾರರಾಗಿ ಪರಿಗಣಿಸಲಾಗಿತ್ತು.