ಯುಎಇ: 1993 ರ ಮುಂಬಯಿ ಸರಣಿ ಬಾಂಬ್ ಸ್ಪೋಟದಲ್ಲಿ ಶಾಮೀಲಾಗಿದ್ದ ಉಗ್ರ ಅಬುಬಕರ್ ಅನ್ನು ಭಾರತದ ಗುಪ್ತಚರ ಇಲಾಖೆಯು ಮಹತ್ವದ ಕಾರ್ಯಾಚರಣೆಯ ನಂತರ ಸೆರೆಹಿಡಿದಿದ್ದಾರೆ.
1993 ರಲ್ಲಿ ಮುಂಬಯಿಯ 12 ಸ್ಥಳಗಳಲ್ಲಿ ಸರಣಿ ಬಾಂಬ್ ಸ್ಪೋಟಿಸಲಾಗಿತ್ತು. ಈ ಘಟನೆಯಲ್ಲಿ 257 ಜನರು ಸಾವನ್ನಪ್ಪಿದ್ದು 713 ಜನರು ಗಾಯಗೊಂಡಿದ್ದರು. ಈ ಸ್ಪೋಟದ ಪ್ರಮುಖ ಸಂಚುಕೋರನಾದ ಅಬುಬಕರ್ ಅವರನ್ನು ಸುಮಾರು 29 ವರ್ಷದ ನಂತರ ಭಾರತೀಯ ಗುಪ್ತಚರ ಇಲಾಖೆಯ ಮಾಹಿತಿಯ ಮೇರೆಗೆ ಯುಎಇ ಅಲ್ಲಿ ಬಂಧಿಸಲಾಗಿದೆ.




ಮುಂಬಯಿಯಲ್ಲಿನ ಸರಣಿ ಸ್ಪೋಟದ ಕುರಿತು ದುಬೈನಲ್ಲಿ ಭೂಗತ ಪಾತಕಿ ದಾವುದ್ ಇಬ್ರಾಹಿಂ ಮನೆಯಲ್ಲಿ ಆರ್ ಡಿ ಎಕ್ಸ್ ಬಳಸಿ ಬಾಂಬ್ ಸ್ಪೋಟಿಸುವ ಸಂಚು ರೂಪಿಸಲಾಗಿತ್ತು ಎಂದು ಉಗ್ರ ಅಬುಬಕರ್ ತಿಳಿಸಿರುವುದಾಗಿ ವರದಿ ವಿವರಿಸಿದೆ.
ಅಬುಬರಕರ್ ಪಾಕಿಸ್ತಾನ ಹಾಗೂ ಯುಎಇ ಅಲ್ಲಿ ವಾಸಿಸುತ್ತಿದ್ದನು. ಈತನನ್ನು 2019 ರಲ್ಲಿ ಯುಎಇ ಅಲ್ಲಿ ಬಂಧಿಸಲಾಗಿತ್ತು ಆದರೆ ಸರಿಯಾದ ದಾಖಲೆಗಳು ಇಲ್ಲದ ಕಾರಣ ಬಿಡುಗಡೆಯಾಗಿದ್ದನು. ಇದೀಗ ಭಾರತೀಯ ಗುಪ್ತಚರ ಇಲಾಖೆ ನೀಡಿದ ಮಾಹಿತಿ ಮೇರೆಗೆ ಬಂಧಿಸಲಾಗಿದೆ. ಈತನನ್ನು ಭಾರತಕ್ಕೆ ಯುಎಇ ಯು ಹಸ್ತಾಂತರಿಸುತ್ತಿದ್ದು, ಬಳಿಕ ಭಾರತದಲ್ಲಿ ಈತ ವಿಚಾರಣೆ ಎದುರಿಸಬೇಕಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.