ಸುಲ್ತಾನಾಬಾದ್: ಬಸ್ ನಲ್ಲಿ ಪ್ರಯಾಣಿಕ ತಂದಿದ್ದ ಹುಂಜಕ್ಕೆ ಕಂಡಕ್ಟರ್ ಟಿಕೆಟ್ ನೀಡಿದ ಘಟನೆ ತೆಲಂಗಾಣದ ಸುಲ್ತಾನಾಬಾದ್ ಸರ್ಕಾರಿ ಬಸ್ನಲ್ಲಿ ನಡೆದಿದೆ.
ಪ್ರಯಾಣಿಕನೊಬ್ಬ ಹುಂಜದೊಂದಿಗೆ ಬಸ್ ಹತ್ತಿದ್ದಾನೆ. ಸ್ಪಲ್ಪ ದೂರ ಬಸ್ ಹೋದ ಮೇಲೆ ಪ್ರಯಾಣಿಕನೊಂದಿಗೆ ಹುಂಜ ಇರುವುದು ಕಂಡಕ್ಟರ್ ತ್ರಿಪಾಟಿ ಗಮನಕ್ಕೆ ಬಂದಿದೆ. ಭೂಮಿಯ ಮೇಲಿನ ಎಲ್ಲಾ ಜೀವಿಗೂ ಟಿಕೆಟ್ ನೀಡಲಾಗುತ್ತದೆ ಎಂದು 30 ರೂ ಟಿಕೆಟ್ ನೀಡಿದ್ದಾರೆ.
ಈ ಘಟನೆಯನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದ್ದು, ಇದನ್ನು ಕಂಡ ತೆಲಂಗಾಣ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಸರ್ಕಾರಿ ಬಸ್ ಗಳಲ್ಲಿ ಪ್ರಾಣಿಗಳನ್ನು ಸೇರಿಸುವಂತಿಲ್ಲ ಆದಾಗ್ಯೂ ಕಂಡಕ್ಟರ್ ತ್ರಿಪಾಟಿ ಟಿಕೆಟ್ ನೀಡಿದ್ದರಿಂದ ಆತನ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದಿದ್ದಾರೆ. ಸದ್ಯ ಕಂಡಕ್ಟರ್ ಹುಂಜಕ್ಕೆ ಟಿಕೆಟ್ ನೀಡಿದ ವಿಡಿಯೋ ಸಖತ್ ವೈರಲ್ ಆಗಿದೆ.