Saturday, June 7, 2025

ಹೊಸ ವರ್ಷದಂದು ರಾಜ್ಯದಲ್ಲಿ ಸಾವಿರದ ಗಡಿ ದಾಟಿದ ಕೊರೊನಾ ಪ್ರಕರಣ

ಬೆಂಗಳೂರು: ವರ್ಷದ ಕೊನೆಯ ದಿನವಾದ ನಿನ್ನೆ ರಾಜ್ಯದಲ್ಲಿ ಒಮಿಕ್ರಾನ್​ ನ ಪ್ರಕರಣಗಳು ಒಂದೇ ಸಲಕ್ಕೆ ತೀವ್ರ ಹೆಚ್ಚಳವಾಗಿತ್ತು. ಇದೀಗ ಕರೊನಾ ಪ್ರಕರಣದಲ್ಲೂ ಸಹ ತುಂಬಾ ಏರಿಕೆಯಾಗಿದ್ದು, ಜನರಲ್ಲಿ ಆತಂಕವನ್ನು ಉಂಟುಮಾಡಿದೆ.

ರಾಜ್ಯದಲ್ಲಿ ಸುಮಾರು ಮೂರೂವರೆ ತಿಂಗಳ ಬಳಿಕ ಒಂದೇ ದಿನಕ್ಕೆ ಸಾವಿರಕ್ಕೂ ಹೆಚ್ಚು ಕೋವಿಡ್​ ಪ್ರಕರಣಗಳು ಪತ್ತೆಯಾಗಿದೆ. ರಾಜ್ಯದಲ್ಲಿ ಇಂದು 1033 ಕೋವಿಡ್​ ಪ್ರಕರಣ ಪತ್ತೆಯಾಗಿದೆ. ಇದೀಗ ರಾಜ್ಯದಲ್ಲಿ 9386ಕ್ಕೆ ಕೋವಿಡ್-19 ರ ಸಕ್ರಿಯ ಪ್ರಕರಣಗಳ ಸಂಖ್ಯೆ ತಲುಪಿದೆ.

ಇಂದು ಬೆಂಗಳೂರಿನಲ್ಲಿ 810 ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಕಳೆದ ಸೆಪ್ಟೆಂಬರ್ 17 ರಂದು 1003 ಕೋವಿಡ್​ ಪ್ರಕರಣಗಳು ಪತ್ತೆಯಾಗಿವೆ. ಇದಾದ ನಂತರ ಇಂದು ಕೋವಿಡ್ ಮತ್ತೆ ಸಾವಿರದ ಗಡಿ ದಾಟಿದೆ.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles