Saturday, June 7, 2025

ಹಣ್ಣು ಒಂದು ಉಪಯೋಗ ಹಲವು

ದಾಳಿಂಬೆ ಹಣ್ಣಿನಲ್ಲಿ ತನ್ನದೇ ಆದ ಔಷಧೀಯ ಗುಣಗಳಿದ್ದು ಇದು ದೇಹಕ್ಕೆ ತುಂಬಾ ಉಪಯುಕ್ತವಾಗಿದೆ. ಕೇವಲ ಹಣ್ಣು ಅಷ್ಟೇ ಅಲ್ಲದೇ ಹಣ್ಣಿನ ಸಿಪ್ಪೆ, ಎಲೆ, ಬೀಜಗಳು ಕೂಡ ದೇಹಕ್ಕೆ ಉಪಯುಕ್ತಕಾರಿ ಆಗಿದೆ.

  • ದಾಳಿಂಬೆ ದೇಹದ ಆರೋಗ್ಯದ ಜೊತೆ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. ಚರ್ಮ ಸುಕ್ಕುಗಟ್ಟುವುದನ್ನು ತಡೆಯುತ್ತದೆ.
  • ದಾಳಿಂಬೆ ಕ್ಯಾನ್ಸರ್ ರೋಗವನ್ನು ತಡೆಗಟ್ಟುತ್ತದೆ. ಕ್ಯಾನ್ಸರ್ ಲಕ್ಷಣಗಳು ಕಂಡುಬಂದಲ್ಲಿ ನಿಯಮಿತವಾಗಿ ದಾಳಿಂಬೆ ಹಣ್ಣು ಸೇವಿಸುವುದು ಉತ್ತಮ.
  • ದಾಳಿಂಬೆ ಹಣ್ಣಿನ ಒಣಗಿದ ಸಿಪ್ಪೆಯಿಂದ ಮೂಳೆಗಳ ಆರೋಗ್ಯ, ಹೃದಯ ಸಂಬಂಧಿ ಸಮಸ್ಯೆ, ಗಂಟಲಿನ ಕೆರೆತ, ಕರುಳು ಸಂಬಂಧಿ ಖಾಯಿಲೆ, ಹಲ್ಲುಗಳು ಹಾಗೂ ವಸಡಿನ ಆರೋಗ್ಯ ಕಾಪಾಡಿಕೊಳ್ಳಬಹುದು.
  • ದಾಳಿಂಬೆ ಹಣ್ಣಿನ ಬೀಜಗಳಿಂದ ಆಮಶಂಕೆ, ಪಿತ್ತ, ಬಾಯಿಹುಣ್ಣು, ಗಂಟಲಿನ ಕಿರಿ ಕಿರಿಯಂತಹ ತೊಂದರೆ ದೂರವಾಗುತ್ತದೆ.
  • 2 ಚಮಚ ದಾಳಿಂಬೆ ಹಣ್ಣಿನ ರಸಕ್ಕೆ 1 ಚಮಚ ಜೇನುತುಪ್ಪ ಬೆರೆಸಿ ಕುಡಿಯುವುದರಿಂದ ತಲೆನೋವು ಕಡಿಮೆಯಾಗುತ್ತದೆ.
  • ದಾಳಿಂಬೆ ಹಣ್ಣಿನ ಎಲೆಗಳನ್ನು ನುಣ್ಣಗೆ ಅರೆದು ಸುಟ್ಟ ಗಾಯಗಳಿಗೆ ಹಚ್ಚುವುದರಿಂದ ಉರಿ ಕಡಿಮೆಯಾಗುತ್ತದೆ.
Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles