Sunday, June 8, 2025

ಭವಿಷ್ಯದಲ್ಲಿ ನಿಯೋಕೊವ್ ರೂಪಾಂತರಿಯ ತೀವ್ರತೆ ಹೆಚ್ಚಲಿದೆ: ವುಹಾನ್ ವಿಜ್ಞಾನಿಗಳ ಎಚ್ಚರಿಕೆ

ನವದೆಹಲಿ: ಕೊರೋನಾ ಹಾಗೂ ಅದರ ರೂಪಾಂತರಿಗಳಿಂದ ಜಗತ್ತೇ ತತ್ತರಿಸಿ ಹೋಗಿದೆ. ಇದೀಗ ಕೊರೋನಾದ ಹೊಸ ರೂಪಾಂತರಿಯಾದ ನಿಯೋಕೊವ್ ಜಗತ್ತಿನ ಆಂತಕ ಹೆಚ್ಚಿಸಿದೆ.

ದಕ್ಷಿಣ ಆಫ್ರಿಕಾದಲ್ಲಿ ಕಂಡುಬಂದ ಈ ರೂಪಾಂತರಿ ಕುರಿತು ಚೀನಾದ ವುಹಾನ್ ವಿಜ್ಞಾನಿಗಳು ಹೆಚ್ಚಿನ ಸಂಶೋಧನೆ ನಡೆಸುತ್ತಿದ್ದಾರೆ. ಭವಿಷ್ಯದಲ್ಲಿ ಈ ರೂಪಾಂತರಿಯ ತೀವ್ರತೆ ಹಾಗೂ ಸಾವಿನ ಪ್ರಮಾಣ ಹೆಚ್ಚಾಗಲಿದೆ. ಪ್ರತಿ ಮೂರು ವ್ಯಕ್ತಿಯಲ್ಲಿ ಒಬ್ಬ ವ್ಯಕ್ತಿ ಸಾಯುತ್ತಾನೆ ಎಂದು ವುಹಾನ್ ಸಂಶೋಧಕರು ಎಚ್ಚರಿಸಿದ್ದಾರೆ.

ವುಹಾನ್ ಸಂಶೋಧಕರ ಎಚ್ಚರಿಕೆಯ ನಡುವೆ ವಿಶ್ವ ಆರೋಗ್ಯ ಸಂಸ್ಥೆಯು ಚೀನಾದ ವುಹಾನ್ ಲ್ಯಾಬ್ ನ ವಿಜ್ಞಾನಿಗಳು ನಿಯೋಕೊವ್ ರೂಪಾಂತರಿಯನ್ನು ಪತ್ತೆ ಹಚ್ಚಿದ್ದಾರೆ. ಈ ರೂಪಾಂತರಿಯ ಕುರಿತು ಹೆಚ್ಚಿನ ಅಧ್ಯಯನ ಅಗತ್ಯವಿದೆ. ಈ ರೂಪಾಂತರಿ ಬೆಳವಣಿಗೆ ಕುರಿತು ನಿಗಾ ಇರಿಸಿದ್ದೇವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles