ಮಂಗಳೂರು: ಕ್ರೇನ್ ಹೊತ್ತೊಯ್ಯುತ್ತಿದ್ದ ಲಾರಿ ತಿರುವು ಭಾಗದಲ್ಲಿ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಮಂಗಳೂರು ಹೊರವಲಯದ ನಾಟೆಕಲ್ ಸಮೀಪ ಶುಕ್ರವಾರ ನಡೆದಿದೆ.
ಮುಡಿಪುವಿನಿಂದ ಗದಗಕ್ಕೆ ಕ್ರೇನ್ ಹೊತ್ತೊಯ್ಯುತ್ತಿದ್ದ ಲಾರಿಯು ತಿರುವು ಭಾಗದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ. ಘಟನೆಯಲ್ಲಿ ಚಾಲಕ ಹಾಗೂ ಕ್ಲೀನರ್ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಲಾರಿ ಪಲ್ಟಿಯಾದ ಕಾರಣ ಕ್ರೇನ್ ನಿಂದ ಡೀಸೆಲ್ ಹೊರಚೆಲ್ಲುತ್ತಿತ್ತು. ಈ ವೇಳೆ ಸ್ಥಳಕ್ಕೆ ಧಾವಿಸಿದ ಸಂಚಾರಿ ಪೊಲೀಸ್ ಚೆಲ್ಲುತ್ತಿರುವ ಡೀಸೆಲ್ಗೆ ಮರಳನ್ನು ಹಾಕಿ ಭಾರೀ ಅನಾಹುತ ತಪ್ಪಿಸಿದ್ದಾರೆ.