ಕಾರ್ಕಳ: ವಾಹನದಲ್ಲಿ ಅಕ್ರಮವಾಗಿ ಗೋವುಗಳನ್ನು ತುಂಬಿಸಿ ಸಾಗಾಟ ಮಾಡುತ್ತಿದ್ದ ವಾಹನವನ್ನು ಅಜೆಕಾರು ಪೊಲೀಸರು ತಡೆದು ಮೂರು ಗೋವುಗಳನ್ನು ರಕ್ಷಣೆ ಮಾಡಿದ ಘಟನೆ ಜ.30 ರಂದು ನಡೆದಿದೆ.
ಅಜೆಕಾರು ಎಸ್ ಐ ಸುದರ್ಶನ್ ದೊಡಮನಿ ಅವರು ರಾತ್ರಿ ಕರ್ತವ್ಯ ನಿರ್ವಹಿಸುತ್ತಿರುವಾಗ 407 ಟೆಂಪೋ ನಿಂತಿರುತ್ತದೆ. ಚಾಲಕನನ್ನು ವಿಚಾರಿಸಿದಾಗ ಸರಿಯಾದ ಉತ್ತರ ನೀಡದೇ ಟೆಂಪೋ ಅನ್ನು ಮುಂದಕ್ಕೆ ಚಲಾಯಿಸುತ್ತಾನೆ ಪೊಲೀಸರು ನಿಲ್ಲಿಸಲು ಹೇಳಿದರೂ ನಿಲ್ಲಿಸದೇ ಟೆಂಪೋವನ್ನು ವೇಗವಾಗಿ ಚಲಾಯಿಸುತ್ತಾನೆ. ಅನುಮಾನ ಬಂದ ಪೊಲೀಸರು ಗಾಡಿಯನ್ನು ಹಿಂಬಾಲಿಸಿರುತ್ತಾರೆ.
ಚಾಲಕ ಹಿರಿಯಡ್ಕದ ಪೆಟ್ರೋಲ್ ಬಂಕ್ ಬಳಿ ಸಾಗಿ ರಸ್ತೆಯ ಬದಿಯಲ್ಲಿ ಗಾಡಿಯನ್ನು ನಿಲ್ಲಿಸಿ ಓಡಿಹೋಗಿರುತ್ತಾನೆ. ಈ ಗಾಡಿಯಲ್ಲಿ ಯಾವುದೇ ರೀತಿಯ ನಂಬರ್ ಪ್ಲೇಟ್ ಕೂಡ ಕಂಡುಬಂದಿಲ್ಲ. ಟೆಂಪೋದಲ್ಲಿ ಒಂದು ದನ, ಹೋರಿ ಹಾಗೂ ಕರು ಕಂಡು ಬಂದಿದೆ. ಈ ಬಗ್ಗೆಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.