ಪಂಜಾಬ್: ಕಬ್ಬಡ್ಡಿ ಕಪ್ ಟೂರ್ನಿ ವೇಳೆ ದುಷ್ಕರ್ಮಿಗಳು ಮೈದಾನಕ್ಕೆ ನುಗ್ಗಿ ಅಂತಾರಾಷ್ಟ್ರೀಯ ಖ್ಯಾತ ಕಬ್ಬಡ್ಡಿ ಆಟಗಾರ ಸಂದೀಪ್ ನಂಗಲ್ ಅವರಿಗೆ ಗುಂಡು ಹೊಡೆದು ಬರ್ಬರವಾಗಿ ಹತ್ಯೆಗೈದ ಘಟನೆ ಪಂಜಾಬ್‌ನ ಜಲಂಧರ್‌ನ ಮಾಲಿಯನ್ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದೆ.
ಸಂಜೆ 6 ಗಂಟೆಗೆ ಕಬಡ್ಡಿ ಕಪ್ ನಡೆಯುತ್ತಿದ್ದ ವೇಲೆ ಅಪರಿಚಿತ ದುಷ್ಕರ್ಮಿಗಳು ಸಂದೀಪ್ ನಂಗಲ್ ಅವರ ತಲೆ ಮತ್ತು ಎದೆಯ ಮೇಲೆ ಸುಮಾರು 20 ಸುತ್ತು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ದಾಳಿಯಲ್ಲಿ ಮತ್ತೊಬ್ಬ ಯುವಕನ ಕಾಲಿಗೂ ಗುಂಡು ತಗುಲಿದ್ದು, ಇದೀಗ ಹತ್ಯೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅಂತಾರಾಷ್ಟ್ರೀಯ ಕಬ್ಬಡ್ಡಿ ಆಟಗಾರರಾದ ಸಂದೀಪ್ ನಂಗಲ್ ಅವರು ರಾಜ್ಯ ಮಟ್ಟದ ಪಂದ್ಯಗಳನ್ನು ಆಡುವ ಮೂಲಕ ವೃತ್ತಿಜೀವನವನ್ನು ಪ್ರಾರಂಭಿಸಿದರು. ಒಂದು ದಶಕಕ್ಕೂ ಹೆಚ್ಚು ಕಾಲ ಕಬಡ್ಡಿ ಜಗತ್ತಿನಲ್ಲಿ ಮಿಂಚಿದ್ದ ಅವರು ಪಂಜಾಬ್ ಅಷ್ಟೆ ಅಲ್ಲದೇ ಕೆನಡಾ, ಯುಎಸ್‌ಎ, ಯುಕೆಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿದ್ದರು. ಅಭಿಮಾನಿಗಳಿಂದ ‘ಗ್ಲಾಡಿಯೇಟರ್’ ಎಂಬ ಬಿರುದನ್ನು ಪಡೆದಿದ್ದರು.