ನವದೆಹಲಿ: ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವವನ್ನು ಆಚರಿಸುವ ಸಲುವಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕ್ರೇಜಿವಾಲ್ ಅವರ ನೇತೃತ್ವದಲ್ಲಿ ದೆಹಲಿ ಸರ್ಕಾರವು ಇಂದು ರಾಷ್ಟ್ರ ರಾಜಧಾನಿಯ 75 ಸ್ಥಳಗಳಲ್ಲಿ 115 ಅಡಿ ಎತ್ತರದ ತ್ರಿವರ್ಣ ಧ್ವಜವನ್ನು ಹಾರಿಸಲಿದೆ. ಇದರಿಂದ ದೇಶದ ಕೋಟ್ಯಂತರ ಜನರಲ್ಲಿ ದೇಶಭಕ್ತಿಯ ಭಾವನೆ ಮೂಡಿಸಲು ನೆರವಾಗುತ್ತದೆ ಎಂದು ಪಿಡಬ್ಲ್ಯುಡಿ ಸಚಿವ ಸತ್ಯೇಂದ್ರ ಜೈನ್ ತಿಳಿಸಿದ್ದಾರೆ.
ಜನವರಿ 27 ರಂದು 75 ಸ್ಥಳಗಳಲ್ಲಿ ಧ್ವಜ ಹಾರಿಸಲಾಗುತ್ತದೆ. ಹಾಗೂ ಮಾರ್ಚ್ 31 ರ ಒಳಗೆ ದೆಹಲಿಯ 500 ಸ್ಥಳಗಳಲ್ಲಿ ರಾಷ್ಟ್ರಧ್ವಜ ಹಾರಿಸುವ ಗುರಿ ಇದೆ. ಸಾರ್ವಜನಿಕ ಸ್ಥಳಗಳಾದ ಉದ್ಯಾನಗಳು, ಶಾಲೆ, ಮಾರುಕಟ್ಟೆ ಕಾಂಪ್ಲೆಕ್ಸ್, ವಸತಿ ಪ್ರದೇಶ ಹಾಗೂ ತೆರೆದ ಮೈದಾನಗಳಲ್ಲಿ ಧ್ವಜ ಹಾರಿಸುವ ಯೋಜನೆ ಇದೆ ಎಂದು ಪಿಡಬ್ಲ್ಯುಡಿ ಅಧಿಕಾರಿ ಮಾಹಿತಿ ನೀಡಿದ್ದಾರೆ.